November 7, 2026
Saturday, November 7, 2026
spot_img

ಮಗುವನ್ನೂ ಕ್ರೂರವಾಗಿ ಕೊಂದ ಇಂದುಶೇಖರ: ಪುನೀತ್‌ ಪೋಸ್ಟ್‌ಮಾರ್ಟಮ್‌ ವರದಿಯಲ್ಲಿ ಕರಾಳ ಅಂಶ ಬಯಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ. ಆರೋಪಿ ಇಂದುಶೇಖರನ ಕ್ರೂರತೆಗೆ ಸಾಕ್ಷಿಯಂತೆ ಮಗು ಪುನೀತ್‌ ಮರಣೋತ್ತರ ಪರೀಕ್ಷೆ ವರದಿ ಲಭ್ಯವಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಪೊಲೀಸರ ಕೈ ಸೇರಿದೆ. ಮಗುವಿನ ತಲೆ ಮೇಲೆ ಇಂದುಶೇಖರ ಗಟ್ಟಿಯಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರದ ನಂದಿಬೆಟ್ಟ ಅರಣ್ಯ ಪ್ರದೇಶದಲ್ಲಿ ಏಳು ವರ್ಷದ ಬಾಲಕ ಪುನೀತ್‌ ಮೃತದೇಹ ಪತ್ತೆಯಾಗಿದೆ. ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ನೀಡಲಾಗಿದೆ. ಮಗುವಿನ ತಲೆಗೆ ಭಾರವಾದ ವಸ್ತುವಿನಿಂದ ನಾಲ್ಕು ಬಾರಿ ಹೊಡೆದ ಬಿದ್ದಿದೆ. ಇದನ್ನು ಬಿಟ್ಟು ದೇಹದ ಯಾವ ಭಾಗದಲ್ಲಿಯೂ ಗಾಯಗಳಾಗಿಲ್ಲ. ಮೆದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಗ್ಗದಿಂದ ಕೈ ಕಾಲುಗಳನ್ನು ಕಟ್ಟಿದ್ದ ಗುರುತುಗಳು ಕಾಣಸಿಕ್ಕಿವೆ. ಜೊತೆಗೆ ಬಲಗಾಲಿನ ಮೂಳೆ ಮುರಿದಿದೆ. ಮಗುವಿನ ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು.

Must Read