November 7, 2026
Saturday, November 7, 2026
spot_img

2 ಮೊಟ್ಟೆ ಸಾಕು, ಹೊಟ್ಟೆ ತುಂಬಿಸುವ ಎಗ್ ಸಲಾಡ್ ಮನೆಯಲ್ಲೇ ರೆಡಿಯಾಗುತ್ತೆ: ಟ್ರೈ ಮಾಡಿ

ಬೇಯಿಸಿದ ಮೊಟ್ಟೆಗಳಿಂದ ತಯಾರಿಸುವ ಈ ಸಲಾಡ್ ರೆಸಿಪಿಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಹೆಚ್ಚು ಸಮಯ ಅಡುಗೆಮನೆಯಲ್ಲಿ ಕಳೆಯುವ ಅಗತ್ಯವೂ ಇಲ್ಲ. ಬ್ರೆಡ್ ಟೋಸ್ಟ್ ಜೊತೆ ಸ್ಯಾಂಡ್‌ವಿಚ್ ರೂಪದಲ್ಲಿಯೂ ಇದನ್ನು ಸವಿಯಬಹುದು.

ಏನೆಲ್ಲಾ ಪದಾರ್ಥ ಬೇಕು?

ಬೇಯಿಸಿದ ಮೊಟ್ಟೆ – 2
ಮೇಯೊನೇಸ್ – 2 ದೊಡ್ಡ ಚಮಚ
ಮಸ್ಟರ್ಡ್ ಸಾಸ್ – 1 ಚಿಕ್ಕ ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ – 2 ದೊಡ್ಡ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕಾಳುಮೆಣಸಿನ ಪುಡಿ – ¼ ಚಿಕ್ಕ ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವುದು ಹೇಗೆ?

ಮೊದಲು ಮೊಟ್ಟೆಗಳನ್ನು ಬೇಯಿಸಿಕೊಳ್ಳಿ. ಈಗ ಒಂದು ಅಗಲವಾದ ಬೌಲ್‌ಗೆ ಕತ್ತರಿಸಿದ ಮೊಟ್ಟೆಗಳನ್ನು ಹಾಕಿ. ಅದಕ್ಕೆ ಮೇಯೊನೇಸ್, ಮಸ್ಟರ್ಡ್ ಸಾಸ್ ಮತ್ತು ಹೆಚ್ಚಿದ ಈರುಳ್ಳಿ ಸೇರಿಸಿ.

ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ನಿಧಾನವಾಗಿ ಎಲ್ಲವನ್ನೂ ಕಲಸಿಕೊಳ್ಳಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಸಿದ್ಧವಾದ ಎಗ್ ಸಲಾಡ್ ಅನ್ನು ಬ್ರೆಡ್ ಟೋಸ್ಟ್ ನಡುವೆ ಇಟ್ಟು ಸ್ಯಾಂಡ್‌ವಿಚ್ ಆಗಿಯೂ ಅಥವಾ ಕ್ರ್ಯಾಕರ್‌ಗಳೊಂದಿಗೂ ಸವಿಯಬಹುದು.

Must Read

Skip to toolbar