November 8, 2026
Sunday, November 8, 2026
spot_img

ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪನ: 22 ಮಂದಿಗೆ ಗಾಯ, ಕಟ್ಟಡಗಳಿಂದ ದಿಕ್ಕಾಪಾಲಾಗಿ ಓಡಿದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಮಧ್ಯ ಜಪಾನ್‌ನ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಕಟ್ಟಡಗಳಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಂಗಡಿಗಳ ಗಾಜು ಪುಡಿ ಪುಡಿ, ರಸ್ತೆಯಲ್ಲಿ ಪುಸ್ತಕಗಳ ರಾಶಿ

ಜಪಾನ್ ಹವಾಮಾನ ಇಲಾಖೆ ಭೂಕಂಪದ ತೀವ್ರತೆಯನ್ನು 5.7 ಎಂದು ದಾಖಲಿಸಿದ್ದರೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ 5.5 ಎಂದು ಅಂದಾಜಿಸಿದೆ. ಐಚಿ ಪ್ರಾಂತ್ಯದಲ್ಲಿ ಹೆಚ್ಚು ಕಂಪನ ಅನುಭವವಾಗಿದ್ದು, ಹಮಾಮತ್ಸು, ಕ್ಯೋಟೋ, ನಾರಾ, ಯಮನಾಶಿ ಮತ್ತು ಗಿಫು ಸೇರಿದಂತೆ ಹಲವು ಪ್ರದೇಶಗಳು ಪರಿಣಾಮಕ್ಕೆ ಒಳಗಾಗಿವೆ. ಅಂಗಡಿಗಳ ಗಾಜುಗಳು ಒಡೆದು ರಸ್ತೆಗೆ ಚದುರಿದ್ದು, ಪುಸ್ತಕ ಮಳಿಗೆಯೊಂದರಲ್ಲಿ ಕಪಾಟಿನಲ್ಲಿದ್ದ ಪುಸ್ತಕಗಳು ಕೆಳಗೆ ಬಿದ್ದಿವೆ.

ಇದನ್ನೂ ಓದಿ:

ಬುಲೆಟ್ ರೈಲುಗಳ ವೇಗಕ್ಕೆ ಕಡಿವಾಣ

ಮುನ್ನೆಚ್ಚರಿಕಾ ಕ್ರಮವಾಗಿ ಶಿಂಕಾನ್ಸೆನ್ ಬುಲೆಟ್ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ. ನಂಕೈ ಟ್ರಫ್ ಭೂಪದರದಲ್ಲೂ ಸದ್ಯಕ್ಕೆ ಯಾವುದೇ ಅಸಹಜ ಬದಲಾವಣೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

Skip to toolbar