November 8, 2026
Sunday, November 8, 2026
spot_img

ಕತ್ರಿನಾ-ವಿಕ್ಕಿ ದೀಪಾವಳಿ ಸಂಭ್ರಮ: ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟ ವಿಹಾನ್, ಫೋಟೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಮುದ್ದಾದ ಮಗ ವಿಹಾನ್‌ನ ಮೊದಲ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ದಂಪತಿ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

https://www.instagram.com/p/Dfeb2AhNz5o/?obrf=MTR2azJyamJsOWV0eQ==

ವಿಶೇಷವೆಂದರೆ, ಪುಟ್ಟ ಕಂದ ವಿಹಾನ್ ನವೆಂಬರ್ 7 ರಂದು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅದರ ಮರುದಿನವೇ ಈ ಸುಂದರ ಕೌಟುಂಬಿಕ ಫೋಟೋ ಹೊರಬಿದ್ದಿದೆ. ಹಳದಿ ಎಂಬ್ರಾಯ್ಡರಿ ಉಡುಪಿನಲ್ಲಿ ಮಿಂಚುತ್ತಿದ್ದ ಕತ್ರಿನಾ ಮಗನನ್ನು ಪ್ರೀತಿಯಿಂದ ಅಪ್ಪಿ ಹಿಡಿದಿದ್ದರೆ, ಇತ್ತ ಕ್ರೀಮ್ ಬಣ್ಣದ ಕುರ್ತಾ ಧರಿಸಿದ್ದ ವಿಕ್ಕಿ ಮಗನ ಹೆಗಲ ಮೇಲೆ ಕೈಯಿಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆದರೆ ಇವರಿಬ್ಬರಿಗಿಂತ ಹೆಚ್ಚಾಗಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಪುಟ್ಟ ವಿಹಾನ್. ಕ್ರೀಮ್ ಕುರ್ತಾ ಮತ್ತು ಹಳದಿ ಜಾಕೆಟ್ ಧರಿಸಿ, ಅಪ್ಪ-ಅಮ್ಮನ ಮಧ್ಯೆ ನಿಂತು ಮುದ್ದಾಗಿ ಕೈ ಎತ್ತಿ ನಗುತ್ತಿರುವ ವಿಹಾನ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನಸ್ಸು ಗೆದ್ದಿದ್ದಾನೆ.

ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕತ್ರಿನಾ, “ನಮ್ಮ ಪಾಲಿನ ಅತ್ಯಂತ ಪ್ರಕಾಶಮಾನವಾದ ದೀಪಾವಳಿ ಇದು. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷದ ಹಾರೈಕೆಗಳು” ಎಂದು ಬರೆದುಕೊಂಡಿದ್ದಾರೆ.

‘ಉರಿ’ ಸಿನಿಮಾ ನೆನಪಿಸಿದ ಮಗನ ಹೆಸರು

2021 ರಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಿದ್ದ ಈ ಜೋಡಿ, 2025 ರ ನವೆಂಬರ್‌ನಲ್ಲಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ನಂತರ 2026 ರ ಜನವರಿಯಲ್ಲಿ ಮಗನಿಗೆ ‘ವಿಹಾನ್ ಕೌಶಲ್’ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದರು. ಈ ಹೆಸರು ಹೊರಬಿದ್ದಾಗ ವಿಕ್ಕಿ ಕೌಶಲ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಯಾಕೆಂದರೆ, ವಿಕ್ಕಿ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ (2019) ಸಿನಿಮಾದಲ್ಲಿ ಅವರ ಪಾತ್ರದ ಹೆಸರು ‘ಮೇಜರ್ ವಿಹಾನ್ ಸಿಂಗ್ ಶೇರ್ಗಿಲ್’ ಆಗಿತ್ತು. ತಮ್ಮ ನೆಚ್ಚಿನ ನಟನ ಸೂಪರ್ ಹಿಟ್ ಚಿತ್ರದ ಪಾತ್ರದ ಹೆಸರನ್ನೇ ಮಗನಿಗೂ ಇಟ್ಟಿರುವುದಕ್ಕೆ ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಕತ್ರಿನಾ ಕೈಫ್ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದರೆ, ವಿಕ್ಕಿ ಕೌಶಲ್ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಿಗ್ ಬಜೆಟ್ ಚಿತ್ರ ‘ಲವ್ ಅಂಡ್ ವಾರ್’ ಹಾಗೂ ‘ಮಹಾವತಾರ್’ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

Must Read

Skip to toolbar