ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬ ದೇವಿ ಸಾರ್ವಜನಿಕ ದರುಶನಕ್ಕೆ ಇಂದು ಹನ್ನೊಂದನೇ ದಿನವಾಗಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ನ.11ರ ನಂತರ ದೇವಾಲಯದ ಬಾಗಿಲು ಮುಚ್ಚಲಿದ್ದು, ಅಲ್ಲಿಯವರೆಗೂ ಸಾರ್ವಜನಿಕ ದರುಶನಕ್ಕೆ ಅನುಮತಿ ನೀಡಲಾಗಿದೆ.
ಇಂದು ಕಡಿಮೆ ಜನ ಇರುವ ಕಾರಣ ಎಲ್ಲರೂ ಧರ್ಮ ದರುಶನದ ಸಾಲಿನಲ್ಲಿ ನಿಂತು ಶೀಘ್ರವೇ ದರುಶನ ಪಡೆದಿದ್ದಾರೆ. 1000, 300 ರೂ. ವಿಶೇಷ ದರ್ಶನದ ಸಾಲುಗಳಿಗಿಂತ ಧರ್ಮ ದರ್ಶನದ ಸಾಲಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯುತ್ತಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಯವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶವಿದ್ದು, ಮಧ್ಯಾಹ್ನ 3:30 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರಂತರ ದರ್ಶನ ಪಡೆಯಬಹುದಾಗಿದೆ. ಇಂದು ಕೂಡ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆಯಲಿದ್ದಾರೆ. ಈ ಬಾರಿ ದೇವಾಲಯಯದ ಗರ್ಭಗುಡಿ ಬಾಗಿಲುಗಳು ನ.11ಕ್ಕೆ ಮುಚ್ಚಲಿವೆ. ನ.10ರವರೆಗೂ ಜನಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.



