November 9, 2026
Monday, November 9, 2026
spot_img

ಬೆಂಗಳೂರು ಮರ್ಡ*ರ್‌ ಕೇಸ್‌ : ಶಿರಾಡಿ ಘಾಟ್‌ನಲ್ಲಿ ಮತ್ತೆರಡು ಮೃತದೇಹ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬೆಂಗಳೂರಿನ ರಾಜಾಜಿನಗರದ ಏಳು ಮಂದಿಯ ಮರ್ಡರ್‌ ಪ್ರಕರಣದಲ್ಲಿ ಇಂದು ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ. ಏಳು ಜನರನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಬೇಧಿಸಲು ಆರು ವಿಷೇಶ ತಂಡಗಳಾಗಿ ಪೊಲೀಸರು ತನಿಖೆಗೆ ಇಳಿದಿದ್ದರು. ಪೊಲೀಸರ ತಂಡ ಎಲ್ಲಾ ಏಳು ಮೃತದೇಹಗಳನ್ನು ಪತ್ತೆಹಚ್ಚಿದೆ.

ಶಿರಾಡಿ ಘಾಟ್‌ನಲ್ಲಿ ಇಂದು ಎರಡು ಮೃತದೇಹಗಳು ಪತ್ತೆಯಾಗಿವೆ. ಶಂಕರ್‌ ಹಾಗೂ ನಳಿನಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಪೊಲೀಸರು ಹಾಗೂ ಎಫ್‌ಎಸ್‌ಎಲ್‌ ತಂಡ ಬೆಂಗಳೂರಿನಿಂದ ಹೊರಟಿದೆ. ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಕ್ಕ ದಿವ್ಯ, ಶಿವಕುಮಾರ್‌ ಮೃತದೇಹಗಳು, ಸೇಲಂನಲ್ಲಿ ಸಿಕ್ಕಿರುವ ರೂಪವತಿ, ಸುನೀತಾ ಶವಗಳು ಹಾಗೂ ಇಂದು ಶಿರಾಡಿ ಘಾಟ್‌ನಲ್ಲಿ ಸಿಕ್ಕ ಶಂಕರ್‌ ಮತ್ತು ನಳಿನಿ ಮೃತದೇಹಗಳನ್ನು ಪೊಲೀಸರು ಇಂದೇ ಕುಟುಂಬಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಬಳಿಕ ಒಂದೇ ಕಡೆ ಅಂತ್ಯಕ್ರಿಯೆಗೆ ತೀರ್ಮಾನಿಸಲಾಗಿದೆ.

Must Read