ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇಬೇಕಿದೆ. ದೇವಸ್ಥಾನದಲ್ಲಿ ಹೊಸ ರೂಲ್ಸ್ ಜಾರಿಯಾಗಿದ್ದು, ಇನ್ಮುಂದೆ ದೇವಿಯ ದರುಶನಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಕಡ್ಡಾಯವಾಗಿದೆ.
ಹೌದು, ಆಫ್‌ಲೈನ್ ಟಿಕೆಟ್ ವಿತರಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಡಿಜಿಟಲ್ ವ್ಯವಸ್ಥೆಗೆ ಮಣೆ ಹಾಕಲಾಗಿದೆ. ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡವರಿಗೆ ಮಾತ್ರ ದೇವಿಯ ದರುಶನಕ್ಕೆ ಅವಕಾಶ ಸಿಗಲಿದೆ.
ಭಕ್ತರು ದೇವಸ್ಥಾನದ ಕಚೇರಿ ಅಥವಾ ಕೌಂಟರ್‍ಗಳಿಗೆ ಅಲೆಯುವ ಅಗತ್ಯವೇ ಇರುವುದಿಲ್ಲ. ಟಿಕೆಟ್ ವಿತರಣೆಯಲ್ಲಿ ನಡೆಯಬಹುದಾದ ಅಕ್ರಮಗಳು, ಹಣ ದುರುಪಯೋಗ ಮತ್ತು ಭಕ್ತರ ಗೊಂದಲಗಳಿಗೆ ಮುಕ್ತಿ ಹಾಡಲು ಆಡಳಿತ ಮಂಡಳಿ ಈ ಬಿಗಿ ಕ್ರಮ ಕೈಗೊಂಡಿದೆ. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರತ್ಯೇಕ ವೆಬ್‌ಸೈಟ್ https://srichamundeshwaridevi.in/ ನಲ್ಲಿ ಸಮಯವನ್ನು ನೋಡಿಕೊಂಡು ಟಿಕೆಟ್ ಬುಕ್ ಮಾಡಬಹುದಾಗಿದೆ.



