November 10, 2026
Tuesday, November 10, 2026
spot_img

ಪ್ರತೀ ಮನೆಯ ಮುಂದೆಯೇ ಇರುವ ಕಣಗಿಲೆ ಹೂವು ವಿಷಕ್ಕೆ ಸಮಾನ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮೇಲೆ ಕಾಣುವ ಈ ಹೂವನ್ನು ನೀವು ನೋಡಿಯೇ ಇರುತ್ತೀರಿ. ನಿಮ್ಮ ಮನೆಯ ಮುಂದೆ ಅಥವಾ ಪಕ್ಕದ ಮನೆಯ ಮುಂದಾದರೂ ಈ ಗಿಡವನ್ನು ಹಾಕಿಯೇ ಇರುತ್ತಾರೆ. ಇದು ಉಷ್ಣವಲಯದ, ಉಪೋಷ್ಣವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಪ್ರಪಂಚದಾದ್ಯಂತ ಬೆಳೆಸಲಾಗುವ ಸಸ್ಯವಾಗಿದೆ. ಇದನ್ನು ಹೆಚ್ಚಾಗಿ ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ನಿತ್ಯವೂ ಬಹಳಷ್ಟು ಪುಷ್ಪಗಳನ್ನು ನೀಡುವ ಈ ಗಿಡವೆಂದರೆ ಎಲ್ಲರಿಗೂ ಅಚ್ಚುಮೆಚ್ಚು ಆದರೆ ಈ ಹೂವು ವಿಷಕಾರಿ ಅನ್ನೋದು ನಿಮಗೆ ಗೊತ್ತಿದ್ಯಾ?

ನೋಡಲು ಸುಂದರವಾಗಿರುವ ಕಣಗಿಲೆ ಹೂವಿನ ಎಲ್ಲ ಭಾಗಗಳು ಅತ್ಯಂತ ವಿಷಕಾರಿಯಾಗಿವೆ. ಈ ಹೂವಿನಲ್ಲಿ ಕಾರ್ಡಿಯಾಕ್‌ ಗ್ಲೈಕೋಸೈಡ್ಸ್‌ ಹಾಗ ಒಲೆಯಾಂಡ್ರಿನ್‌ ಎನ್ನುವ ವಿಷಕಾರಿ ರಾಸಾಯನಿಕಗಳಿವೆ. ಇದರ ವಿಷಕಾರಿ ಸ್ವಭಾವದಿಂದಲೇ ಯಾರೂ ಈ ಹೂವನ್ನು ಮನೆಯೊಳಕ್ಕೆ ತರುವುದಿಲ್ಲ. ದೇವರಿಗೆ ಮುಡಿಸುವುದಿಲ್ಲ. ಆಯುರ್ವೇದದಲ್ಲಿ ಈ ಹೂವುಗಳನ್ನು ರುಬ್ಬಿ ಚರ್ಮದ ಕಾಯಿಲೆ ನಿವಾರಣೆಗಾಗಿ ಬಳಸಲಾಗುತ್ತದೆ. ಇದನ್ನು ಬಿಟ್ಟು ಇನ್ಯಾವುದೇ ಉಪಯೋಗ ಇಲ್ಲ.

ನಿಮ್ಮ ಮನೆಯಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳಿದ್ದರೆ ಇಂದೇ ಈ ಗಿಡವನ್ನು ಕಿತ್ತು ಎಸೆಯಿರಿ. ಇದರ ಹೂವು, ಎಲೆ, ಕಾಂಡ, ಬೇರು, ಬೀಜ, ಮೊಗ್ಗು ಯಾವುದನ್ನೂ ಮಕ್ಕಳು ಬಾಯಿಗೆ ಹಾಕದಂತೆ ನೋಡಿಕೊಳ್ಳಿ. ಈ ಹೂವನ್ನು ಸೇವಿಸಿದ ನಂತರ ಸೂಕ್ತ ಚಿಕಿತ್ಸೆ ಸಿಗದೇ ಹೋದರೆ ಸಾವು ಕೂಡ ಸಂಭವಿಸುತ್ತದೆ. ಪ್ರಾಚೀನ ಕಾಲದಲ್ಲಿ ಆತ್ಮಹತ್ಯೆಯ ಸಾಧನವಾಗಿ ಈ ಗಿಡವನ್ನು ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಗಿಡವನ್ನು ಕಿತ್ತು ಬೆಂಕಿ ಹಚ್ಚಿ, ಅದರ ಹೊಗೆಯನ್ನು ಸೇವನೆ ಮಾಡಿದರೂ ಅಮಲು ಏರಿದಂತೆ ಆಗುತ್ತದೆ.

ಈ ಹೂವನ್ನು ಸೇವಿಸಿದ ನಂತರ ಈ ಲಕ್ಷಣಗಳು ಕಂಡುಬರುತ್ತದೆ..

ವಾಕರಿಕೆ, ವಾಂತಿ
ತೀವ್ರ ಭೇದಿ
ತಲೆತಿರುಗುವುದು, ಗೊಂದಲ
ನಿಧಾನವಾಗಿ ಹೃದಯಬಡಿತವಾಗುವುದು, ಅನಿಯಮಿತ ಹೃದಯಬಡಿತ ಉಂಟಾಗುತ್ತದೆ
ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ.

Must Read