ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಹೊಸೂರಿನಲ್ಲಿರುವ ಐಫೋನ್ ಘಟಕದಲ್ಲಿ ವಿಷಾನಿಲ ಸೇವನೆಯಿಂದಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ಟಾಟಾ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದು, ಮೂವರು ಗುತ್ತಿಗೆ ಕಾರ್ಮಿಕರು ಪ್ರಾಣಬಿಟ್ಟಿದ್ದಾರೆ. ಹೊಸೂರಿನ ನಿವಾಸಿ ಕಾವೇರಿ (30), ಧರ್ಮಪುರಿ ಜಿಲ್ಲೆಯ ನಿವಾಸಿಗಳಾದ ಬಿ. ಅಕ್ಮಲ್ (28) ಮತ್ತು ಎಂ. ಸಾರಥಿ ಕುಮಾರ್ (28) ಮೃತರು.
ಆಪಲ್ ಐ ಫೋನ್ ಬಿಡಿ ಭಾಗಗಳನ್ನು ತಯಾರಿಸುವ ಘಟಕ ಇದಾಗಿದ್ದು, ತ್ಯಾಜ್ಯ ನೀರು ಸಂಗ್ರಹಣಾ ತೊಟ್ಟಿಯನ್ನು ಸ್ವಚ್ಛಗೊಳಿಸುವಾಗ ವಿಷಾನಿಲ ಸೇವನೆ ಮಾಡಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೈಗಾರಿಕಾ ಸಚಿವೆ ವಿರುಧೈ ಮಗಲ್ ಕೀರ್ತನಾ ಅವರು ಸಂತಾಪ ಸೂಚಿಸಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸುವಂತೆ ಹಾಗೂ ಈ ವಿಷಯವನ್ನು ತುರ್ತಾಗಿ ನಿರ್ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.



