ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿರು ಕಣ್ಣಿನ ಆಸ್ಪತ್ರೆಗಳಲ್ಲಿ ಜನ ಕ್ಯೂ ನಿಂತಿದ್ದಾರೆ. ಒಂದೇ ಒಂದು ನಿಮಿಷದ ಸಂಭ್ರಮದಲ್ಲಿ ಮಕ್ಕಳು, ಡೊಡ್ಡವರು ಕಣ್ಣಿಗೆ ಹಾನಿ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ ಉಂಟಾದ ಅವಘಡಗಳ ಸಂಖ್ಯೆ ಇದೀಗ 61ಕ್ಕೆ ಏರಿಕೆಯಾಗಿದೆ.
ಪಟಾಕಿ ನೆಲಕ್ಕೆ ಇಟ್ಟು ಬಗ್ಗಿ ಕಿಡಿ ಹಚ್ಚುವ ವೇಳೆ ಪಟಾಕಿಯ ತುಣುಕುಗಳು ಕಣ್ಣಿಗೆ ಬೀಳುವುದು, ದೂರದಲ್ಲಿ ನಿಂತಿದ್ದರೂ ಪಟಾಕಿ ಕಿಡಿಗಳು ಸಿಡಿಯುವುದು, ಇನ್ನು ಪಟಾಕಿ ಸರಿಯಿಲ್ಲದೇ ಬ್ಯಾಕ್ ಫೈಯರ್ ಆದ ಕಾರಣ ಮಕ್ಕಳಿಂದ ವೃದ್ಧರವರೆಗೂ ಪಟಾಕಿ ಅವಘಡಗಳು ಸಂಭವಿಸಿವೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯೊಂದರಲ್ಲಿಯೇ ಇಪ್ಪತ್ತು ಮಂದಿ ಇಂದು ಕಣ್ಣನ್ನು ಪರಿಶೀಲಿಸಲು ಆಗಮಿಸಿದ್ದಾರೆ.
ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ. ಫ್ರೌಡರು 16 ಮಂದಿ, 18 ವರ್ಷದೊಳಗಿನ 15 ಮಕ್ಕಳು ಗಾಯಗೊಂಡಿದ್ದಾರೆ. ಒಟ್ಟು ಪುರುಷರು 19, ಮಹಿಳೆಯರು 12 ಜನರಿಗೆ ಹಾನಿಯಾಗಿದೆ. ಈ ಪೈಕಿ ಸ್ವತಃ ಪಟಾಕಿ ಹಚ್ಚುವಾಗ 23 ಜನರಿಗೆ ಗಾಯ ಹಾಗೂ 8 ಜನ ಪಟಾಕಿ ಹಚ್ಚುವುದನ್ನ ನೋಡುತ್ತಿದ್ದಾಗ ಕಣ್ಣಿಗೆ ಗಾಯ ಆಗಿದೆ. ಇದರಲ್ಲಿ ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಆಗಿದ್ದು, ಉಳಿದ 30 ಗಾಯಳುಗಳಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿದೆ.



