ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ನಟಿ ಮಾಲಾಶ್ರೀ ಹಾಗೂ ಕನ್ನಡದ ಹ್ಯಾಪೆನಿಂಗ್ ನಟಿ ರುಕ್ಮಿಣಿ ವಸಂತ್ ಅಭಿನಯದ ಮಂಗಳ ಗೌರಿ ಸಿನಿ ತಂಡ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ.
ಪಿ.ಕೆ. ರಾಹುಲ್ ನಿರ್ದೇಶನದ ಸಿನಿಮಾ ಇದಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ದಕ್ಷಾಯಿಣಿ ಟಾಕೀಸ್ ಸಿನಿಮಾಗೆ ಹಣ ಹೂಡಿದೆ. ಆಕ್ಷನ್ ಹಾಗೂ ಡ್ರಾಮಾ ಕಥೆ ಇದಾಗಿದ್ದು, ಮಹಿಳೆಯರೇ ಇದರಲ್ಲಿ ಹೀರೋ ಎನ್ನಲಾಗಿದೆ.
ಇಂದು ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ರುಕ್ಮಿಣಿ ಪೊಲೀಸ್ ಯುನಿಫಾರ್ಮ್ ಧರಿಸಿದ್ದಾರೆ. ನಟಿ ಮಾಲಾಶ್ರೀ ಕೈಯಲ್ಲಿ ಅಡುಗೆ ಮಾಡುವ ಸೌಟಿದೆ. ಹೀಗಾಗಿ ಸಿನಿಮಾದಲ್ಲಿ ಇವರಿಬ್ಬರೂ ಅಮ್ಮ ಮಗಳಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಂಗಳ ಆಗಿ ಮಾಲಾಶ್ರೀ ಹಾಗೂ ಗೌರಿಯಾಗಿ ರುಕ್ಮಿಣಿ ವಸಂತ್ ಅಭಿನಯ ಮಾಡ್ತಿದ್ದಾರೆ.
https://www.instagram.com/p/DfjLfNfoHk1/?img_index=2&obrf=MW9wNjl2MXpyYzZycQ%3D%3D
ಸಿನಿಮಾದ ಫಸ್ಟ್ ಲುಕ್ ಸೆಪ್ಟೆಂಬರ್ನಲ್ಲಿ ರಿಲೀಸ್ ಆಗಿದ್ದು, ಬಿಡುಗಡೆಯ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ. ಅದಾಗ್ಯೂ ಸಿನಿಮಾ ಮುಕ್ತಾಯ ಹಂತದಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.



