November 11, 2026
Wednesday, November 11, 2026
spot_img

ರಾಮಾಯಣ ರಿವ್ಯೂ ಕೊಟ್ಟ ʼಮೆಸ್ಸಿʼ, ʼರೊನಾಲ್ಡೋʼ : ಪಿಆರ್‌ ಟೀಮ್‌ ನೆಕ್ಸ್ಟ್‌ ಲೆವೆಲ್‌ ಎಂದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ರಾಮಾಯಣ ತೆರೆ ಮೇಲೆ ಅಪ್ಪಳಿಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ್ದೇವೆ ಅದ್ಭುತವಾಗಿದೆ ಎಂದು ಬಾಲಿವುಡ್‌ ಸೆಲೆಬ್ರಿಟಿಗಳು ನಿತ್ಯವೂ ಪೋಸ್ಟ್‌ ಮಾಡ್ತಿದ್ದಾರೆ. ಈ ಲಿಸ್ಟ್‌ಗೆ ಲಿಯೋನೆಲ್‌ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಕೂಡ ಸೇರಿದ್ದಾರೆ. ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ರಾಮಾಯಣ ಸಿನಿಮಾ ಅದ್ಭುತವಾಗಿದೆ ಎಂದು ಪೋಸ್ಟ್‌ ಮಾಡಿದ್ದು, ಬಾಲಿವುಡ್‌ ಪಿಆರ್‌ ಗೇಮ್‌ ಬಗ್ಗೆ ಫ್ಯಾನ್ಸ್‌ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಪ್ಲೇಯರ್‌ಗಳು ಬಾಲಿವುಡ್‌ನ ರಾಮಾಯಣ ಸಿನಿಮಾ ನೋಡಿ ಫಿಲಂ ಚೆನ್ನಾಗಿದೆ ಎಂದು ಪೋಸ್ಟ್‌ ಮಾಡಿರುವ ಬಾಲಿವುಡ್‌ ಫ್ಯಾನ್ಸ್‌ ಕೂಡ ನಂಬಲು ಕಷ್ಟಪಡುವ ವಿಷಯವಾಗಿದೆ. ರಾಮಾಯಣ ನೋಡಿದೆ, ಎಂತಹ ಎಕ್ಸ್ಟ್ರಾ ಆರ್ಡಿನರಿ ಸಿನಿಮಾ ಇದು. ರಣ್‌ಬೀರ್‌ ರಾಮನಾಗಿ ಅದ್ಭುತ ನಟನೆ ಮಾಡಿದ್ದಾರೆ. ಅವರ ಶಾಂತ ಸ್ವಭಾವ ದೈವಿ ಕಳೆ ಎದ್ದು ಕಾಣಿಸುತ್ತಿದೆ. ಯಶ್‌ ಸ್ಕ್ರೀನ್‌ ಮೇಲೆ ಬಂದರೆ ಇನ್ನೆಲ್ಲೂ ಕಣ್ಣು ಹೋಗೋದೇ ಇಲ್ಲ. ಸಾಯಿ ಪಲ್ಲವಿ ಅದ್ಭುತವಾಗಿ ಕಾಣಿಸಿದ್ದಾರೆ. ಈ ಐತಿಹಾಸಿಕ ಕಥೆಯನ್ನು ತೆರೆ ಮೇಲೆ ತಂದಿರುವ ಕ್ರೆಡಿಟ್‌ ನಿತೀಷ್‌ ತಿವಾರಿಗೆ ಸಲ್ಲಬೇಕು. ಪಾರ್ಟ್‌ ಎರಡಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ರೊನಾಲ್ಡೊ ತಮ್ಮ ಟ್ವೀಟ್‌ನಲ್ಲಿ ರಣ್‌ಬೀರ್‌ ರಾಮನಾಗಿ ಅದ್ಭುತ ನಟನೆ ಮಾಡಿದ್ದಾರೆ. ಅವರ ಶಾಂತ ಸ್ವಭಾವ ದೈವಿ ಕಳೆ ಎದ್ದು ಕಾಣಿಸುತ್ತಿದೆ. ಯಶ್‌ ಸ್ಕ್ರೀನ್‌ ಮೇಲೆ ಬಂದರೆ ಇನ್ನೆಲ್ಲೂ ಕಣ್ಣು ಹೋಗೋದೇ ಇಲ್ಲ. ಸಾಯಿ ಪಲ್ಲವಿ ಅದ್ಭುತವಾಗಿ ಕಾಣಿಸಿದ್ದಾರೆ. ಈ ಐತಿಹಾಸಿಕ ಕಥೆಯನ್ನು ತೆರೆ ಮೇಲೆ ತಂದಿರುವ ಕ್ರೆಡಿಟ್‌ ನಿತೀಷ್‌ ತಿವಾರಿಗೆ ಸಲ್ಲಬೇಕು. ಪಾರ್ಟ್‌ ಎರಡಕ್ಕಾಗಿ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇಬ್ಬರು ದಿಗ್ಗಜರು ಒಂದೇ ವಿಷಯಗಳನ್ನು ಟ್ವೀಟ್‌ ಮಾಡಿರುವ ಕಾರಣ ಫ್ಯಾನ್ಸ್‌ ಇವರು ಸಿನಿಮಾ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬಾಲಿವುಡ್‌ ಟೀಂ ನೀಡಿರುವ ಸ್ಕ್ರಿಪ್ಟ್‌ನ್ನು ಯಥಾವತ್ತಾಗಿ ಪೋಸ್ಟ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಸಿನಿಮಾ ಬಗ್ಗೆ ಪೋಸ್ಟ್‌ ಮಾಡಲು ಇಂತಿಷ್ಟು ಹಣ ಎಂದು ನೀಡಲಾಗುತ್ತದೆ. ಕೆಲವು ಸೆಲೆಬ್ರಿಟಿಗಳು ಹಣ ಪಡೆಯದೇ ಪೋಸ್ಟ್‌ ಮಾಡುತ್ತಾರೆ, ಕೆಲವರು ಸಪೋರ್ಟ್‌ಗಾಗಿ ಪೋಸ್ಟ್‌ ಮಾಡುತ್ತಾರೆ. ಆದರೆ ಮೆಸ್ಸಿ ಹಾಗೂ ರೊನಾಲ್ಡೋರಂತಹ ಸೆಲೆಬ್ರಿಟಿಗಳ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್‌ ಮಾಡಿಸಬೇಕು ಎಂದರೆ ರಾಮಾಯಣ ಪಿಆರ್‌ ಟೀಂ ಕೋಟಿ ಕೋಟಿ ಹಣ ಖರ್ಚು ಮಾಡಿರುವುದು ಖಚಿತ ಎನ್ನಲಾಗಿದೆ.

Must Read