November 11, 2026
Wednesday, November 11, 2026
spot_img

ಸುಳ್ಯದಲ್ಲಿ‌ ಅವಘಡ: ಕಾರು ಹಿಂದಕ್ಕೆ ತೆಗೆಯುವಾಗ ಚಕ್ರಕ್ಕೆ ಸಿಲುಕಿ ಮಹಿಳೆ ದಾರುಣ ಸಾವು

ಹೊಸದಿಗಂತ ಸುಳ್ಯ:

ಕಾರು ಹಿಂದಕ್ಕೆ ತೆಗೆಯುವಾಗ ಕಾರಿನ ಚಕ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಸಬಾ ಗ್ರಾಮದ ದುಗಲಡ್ಕ ಎಂಬಲ್ಲಿ ಬುಧವಾರ ನಡೆದಿದೆ.

ಮೃತ ಮಹಿಳೆಯನ್ನು ಕಮಾರುನ್ನಿಸಾ (46) ಎಂದು ಗುರುತಿಸಲಾಗಿದೆ.

ಈ ಮಹಿಳೆಯು ರಬ್ಬರ್ ಮೂರ್ತೆಗೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಮೃತದೇಹವನ್ನು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Must Read