ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಇದರೊಂದಿಗೆ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ರಾಹುಕಾಲದ ಹಿನ್ನೆಲೆಯಲ್ಲಿ ಈ ಬಾರಿ ಮಧ್ಯಾಹ್ನ 1.30ರ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಅದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೇವಿಯ ಅಂತಿಮ ದರುಶನ ಪಡೆದರು.
ಇದನ್ನೂ ಓದಿ:
ನಂತರ ಅರ್ಚಕರು ದೇವಿಯ ಅಲಂಕಾರ ತೆರವುಗೊಳಿಸಿ, ಒಡವೆಗಳನ್ನು ತೆಗೆದು ಪೂಜೆ ನೆರವೇರಿಸಿದರು. ಬಳಿಕ ದೀಪಕ್ಕೆ ಎಣ್ಣೆ ಹಾಕಿ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ, ಪ್ರಧಾನ ಅರ್ಚಕ ನಾಗರಾಜ್ ಅವರು ಮುದ್ರೆ ಒತ್ತಿದರು. ಈ ಮೂಲಕ ಈ ವರ್ಷದ ಹಾಸನಾಂಬೆ ದರುಶನೋತ್ಸವ ಮುಕ್ತಾಯಗೊಂಡಿತು.



