November 14, 2026
Saturday, November 14, 2026
spot_img

ಇಂದಿನಿಂದ ಪಿಂಕ್‌ ಲೈನ್‌ ಮೆಟ್ರೋ ಸಂಚಾರ ಆರಂಭ: ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಬಹುನಿರೀಕ್ಷಿತ ಪಿಂಕ್‌ ಲೈನ್‌ ಮೆಟ್ರೋವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದು, ಇಂದಿನಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ.

ಕಾಳೇನ ಅಗ್ರಹಾರದಿಂದ ಎಸ್‌.ಜಿ. ಪಾಳ್ಯವರೆಗಿನ ಹೊಸ ಮೆಟ್ರೋ ಮಾರ್ಗದಲ್ಲಿ ಇಂದು ಬೆಳಗ್ಗೆಯಿಂದಲೇ ಜನ ಓಡಾಟ ನಡೆಸಿದ್ದಾರೆ.ಹೊಸದಾಗಿ ಆರಂಭವಾಗಿರುವ ಪಿಂಕ್ ಲೈನ್ ಮಾರ್ಗವು ಕಾಳೇನ ಅಗ್ರಹಾರದಿಂದ ಎಸ್‌.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ) ವರೆಗೆ ಸಂಪರ್ಕ ಕಲ್ಪಿಸುತ್ತದೆ.

ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (ಬಿಳೇಕಹಳ್ಳಿ), ಎನ್‌.ಎಸ್‌. ಪಾಳ್ಯ-ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ಎಸ್‌.ಜಿ. ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಿವೆ. ಪಿಂಕ್‌ ಲೈನ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಪ್ರತಿ ಎಂಟು ನಿಮಿಷಕ್ಕೊಂದು ರೈಲು ಸಂಚಾರವಾಗಲಿದೆ. ಇತರ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ಓಡಾಡಲಿದೆ.

ಟಿಕೆಟ್‌ ದರ ಎಷ್ಟು?

ಏಸ್‌ಜಿ ಪಾಳ್ಯದಿಂದ ಕಾಳೇನ ಅಗ್ರಹಾರಕ್ಕೆ ₹30, ಎಸ್‌ಜಿ ಪಾಳ್ಯದಿಂದ ಹುಳಿಮಾವುಗೆ ₹20, ಎಸ್‌.ಜಿ. ಪಾಳ್ಯದಿಂದ ಐಐಎಂಬಿಗೆ ₹20, ಎಸ್‌ಜಿ ಪಾಳ್ಯದಿಂದ ಎನ್‌.ಎಸ್‌ ಪಾಳ್ಯ ಜೆಪಿ ನಗರ ನಾಲ್ಕನೇ ಹಂತಕ್ಕೆ ₹10 ರೂಪಾಯಿ ದರ ನಿಗದಿ ಮಾಡಲಾಗಿದೆ.

Must Read