ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಮುಂದಿನ ಹಾರರ್ ಸಿನಿಮಾ ‘ಹೀರೋ ಕಿ ಹಾರರೈನ್’ ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಅನ್ನು ಶುಕ್ರವಾರ ಬಿಡುಗೆಡೆ ಮಾಡಿದ್ದಾರೆ. ಈ ಚಿತ್ರದ ಮೂಲಕ ಹಿರಿಯ ನಟ ಗೋವಿಂದ ಅವರ ಪುತ್ರ ಯಶ್‌ವರ್ಧನ್ ಅಹುಜಾ ಬಾಲಿವುಡ್‌ಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಭಯ ಹುಟ್ಟಿಸುವ ಫಸ್ಟ್ ಲುಕ್ ಪೋಸ್ಟರ್
ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್‌ನಲ್ಲಿ ಭಯಾನಕ ಮಹಿಳಾ ಪಾತ್ರವೊಂದನ್ನು ಪರಿಚಯಿಸಲಾಗಿದ್ದು, ಅಲೌಕಿಕ ಜಗತ್ತಿನ ಸಣ್ಣ ಸುಳಿವನ್ನು ನೀಡಲಾಗಿದೆ. ಚಿತ್ರದ ಕಥಾಹಂದರವನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಏಕ್ತಾ ಕಪೂರ್, “ಹೀರೋಯಿನ್ ದಿಲ್ ಲೇ ಜಾತಿ ಹೈ… ಹಾರರೈನ್ ದಿಲ್ ಖಾ ಜಾತಿ ಹೈ” ಎಂದು ಕುತೂಹಲಕಾರಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಮಗನ ಜೊತೆ ತೆರೆ ಹಂಚಿಕೊಳ್ಳುತ್ತಿರುವ ತಾಯಿ ಸುನೀತಾ
ಸಾಜಿದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಗೋವಿಂದ ಪತ್ನಿ ಸುನೀತಾ ಅಹುಜಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಈ ಹಿಂದೆ ಮಾತನಾಡಿದ್ದ ಸುನೀತಾ, “ಯಶ್ ಸಿನಿಮಾದಲ್ಲಿ ನಾನು ಅವನ ತಾಯಿಯ ಪಾತ್ರವನ್ನೇ ಮಾಡುತ್ತಿದ್ದೇನೆ. ಬಹುಶಃ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ತಾಯಿ ಮತ್ತು ಮಗ ಒಟ್ಟಿಗೆ ಸಿನಿಮಾಗೆ ಲಾಂಚ್ ಆಗುತ್ತಿದ್ದೇವೆ” ಎಂದು ಸಂತಸ ಹಂಚಿಕೊಂಡಿದ್ದರು.
ತಾರಾಗಣ
ಈ ಸಿನಿಮಾದ ಮೂಲಕ ಏಕ್ತಾ ಕಪೂರ್ ಮತ್ತೆ ಹಾರರ್ ಜಾನರ್‌ಗೆ ಮರಳಿದ್ದು, ‘ಬಜರಂಗಿ ಭಾಯಿಜಾನ್’ ಖ್ಯಾತಿಯ ನಿರ್ಮಾಪಕ ಅಮರ್ ಬುಟಾಲಾ ಹಾಗೂ ಶೋಭಾ ಕಪೂರ್ ಅವರೊಂದಿಗೆ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ನಿತಾಂಶಿ ಗೋಯೆಲ್, ಜೇಮಿ ಲಿವರ್, ಚಂಕಿ ಪಾಂಡೆ, ಬ್ರಿಜೇಂದ್ರ ಕಾಲಾ ಮತ್ತು ಸಿಮ್ರತ್ ಕೌರ್ ರಾಂಧವಾ ಪ್ರಮುಖ ತಾರಾಗಣದಲ್ಲಿದ್ದು, ಮುಂದಿನ ವರ್ಷ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.



