ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮೀ ಹಣಕ್ಕಾಗಿ ಮೊಮ್ಮಗನೇ ಅಜ್ಜಿಯನ್ನು ಕೊಂದಿರುವ ಘಟನೆ ಬೆಳಗಾವಿಯ ಹುಕ್ಕೇರಿಯಲ್ಲಿ ನಡೆದಿದೆ.
ಹುಕ್ಕೇರಿಯ ಅರಳಿಕಟ್ಟಿ ಗ್ರಾಮದ ಹಮ್ಮವ್ಚ ಸನದಿ ಮೃತರು. ಮೊಮ್ಮಗ ಭೀಮಪ್ಪ ಸವದಿ ಅಜ್ಜಿಯನ್ನು ಕೊಲೆ ಮಾಡಿ ತದನಂತರ ಮೃದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ತನ್ನ ಬೈಕ್‌ನಲ್ಲಿ ಸುಮಾರು ಹದಿನೈದು ಕಿ.ಮೀ ಪ್ರಯಾಣಿಸಿ ಡ್ಯಾಮ್ ಒಂದರಲ್ಲಿ ಚೀಲವನ್ನು ಎಸೆದಿದ್ದಾನೆ. ಹಮ್ಮವ್ವ ಪಾಶ್ಚಾಪುರ ಸಂತೆಗೆ ತೆರಳಿದ್ದರು. ಸಂತೆಗೆ ಹೋದವರು ವಾಪಾಸ್ ಬರಲೇ ಇಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹಮ್ಮವ್ವ ಹೊರಡುವ ದಿನ ಮೊಮ್ಮಗ ಭೀಮಪ್ಪ ಅಜ್ಜಿಯ ಜೊತೆ ಗೃಹಲಕ್ಷ್ಮಿ ಹಣದ ವಿಚಾರವಾಗಿ ಜಗಳ ಆಡಿದ್ದ ಎನ್ನಲಾಗಿದೆ. ಇದಾದ ನಂತರ ಮನೆಗೆ ಬೆಳ್ಳಿಯ ಆಭರಣಗಳನ್ನು ತರೋಣ ಎಂದು ಹೇಳಿ ಅಜ್ಜಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾನೆ. ತದನಂತರ ಸೊಸೈಟಿಯಲ್ಲಿ ಹಣ ತೆಗೆಸಿಕೊಂಡಿದ್ದಾನೆ. ತದನಂತರ ಅಜ್ಜಿಯ ಜೊತೆ ಗವಿಸಿದ್ದೇಶ್ವರ ಗುಡ್ಡಕ್ಕೆ ತೆರಳಿದ್ದಾನೆ. ಅಲ್ಲಿ ಯಾರೂ ಇಲ್ಲದ ಸ್ಥಳಕ್ಕೆ ಕರೆದೊಯ್ದಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅವಳ ಬಳಿ ಇದ್ದ ಎರಡು ಸಾವಿರ ರೂಪಾಯಿ ಹಣ ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ತದನಂತರ ಅಜ್ಜಿಯನ್ನು ಗೋಣಿಚೀಲಕ್ಕೆ ತುಂಬಿದ್ದಾನೆ.
ಕೊಲೆಯ ನಂತರ ಅಜ್ಜಿ ಕಾಣೆಯಾಗಿದ್ದಾರೆ ಎಂದು ಭೀಮಪ್ಪ ತನ್ನ ತಂದೆ ರಾಮಪ್ಪನಿಗೆ ತಿಳಿಸಿದ್ದಾನೆ. ಹುಟುಕಾಟದ ನಾಟಕವೂ ಆಡಿದ್ದಾನೆ. ತದನಂತರ ರಾಮಪ್ಪ ತಮ್ಮ ಮಗಳಿಗೂ ಅಜ್ಜಿ ಕಾಣೆಯಾಗಿರುವ ವಿಚಾರ ತಿಳಿಸಿದ್ದಾರೆ. ಆಕೆ ತಡಮಾಡದೇ ಪೊಲೀಸರಿಗೆ ದೂರು ನೀಡಿದ್ದಾರೆ.
ಹಿಡಕಲ್ ಡ್ಯಾಮ್‌ನಲ್ಲಿ ಮೃತದೇಹವನ್ನು ಭೀಮಪ್ಪ ಎಸೆದಿದ್ದ, ಇದಾದ ಕೆಲ ದಿನಗಳಲ್ಲಿ ಅಜ್ಜಿಯ ಮೃತದೇಹ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ತದನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮನೆಯವರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಭೀಮಪ್ಪನೇ ಅಜ್ಜಿಯ ಜೊತೆ ಕಡೆಯ ಬಾರಿಗೆ ಇದ್ದ ಮಾಹಿತಿ ಲಭ್ಯವಾಗಿದೆ.



