November 20, 2026
Friday, November 20, 2026
spot_img

‘ಗಂಗಾ’ ನಿವಾಸದ ಬೆನ್ನಲ್ಲೇ ವಿಧಾನಸೌಧದ ಸಭಾಂಗಣಕ್ಕೆ ‘ಸಂಗಮ’ ಎಂದು ನಾಮಕರಣ ಮಾಡಿದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಾವು ವಾಸವಿರುವ ನವೀಕೃತ ಕೆಕೆ ಅತಿಥಿ ಗೃಹಕ್ಕೆ ‘ಗಂಗಾ’ ಎಂದು ನಾಮಕರಣ ಮಾಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೀಗ ಶಕ್ತಿಸೌಧ ವಿಧಾನಸೌಧದ ಆಧುನೀಕರಣಗೊಂಡ ಸಮ್ಮೇಳನ ಸಭಾಂಗಣಕ್ಕೆ ‘ಸಂಗಮ’ ಎಂದು ಹೆಸರಿಟ್ಟು ಲೋಕಾರ್ಪಣೆಗೊಳಿಸಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಹಳೆಯ ಸಭಾಂಗಣವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಇಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಇದನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಹಾಗೂ ಬೈರತಿ ಸುರೇಶ್ ಅವರು ಉಪಸ್ಥಿತರಿದ್ದರು. ನಿನ್ನೆಯಷ್ಟೇ ಕುಟುಂಬ ಸಮೇತ ಬಲಿಪೂಜೆ ನೆರವೇರಿಸುವ ಮೂಲಕ ನೂತನ ನಿವಾಸ ‘ಗಂಗಾ’ಗೆ ಸಿಎಂ ಗೃಹಪ್ರವೇಶ ಮಾಡಿದ್ದರು.

ಆಡಳಿತಕ್ಕೆ ವೇಗ ನೀಡಲು ‘ಸಿಎಂ ಡ್ಯಾಶ್‌ಬೋರ್ಡ್’

‘ಸಂಗಮ’ ಸಭಾಂಗಣದ ಉದ್ಘಾಟನೆಯ ಜೊತೆಗೆ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ‘ಸಿಎಂ ಡ್ಯಾಶ್‌ಬೋರ್ಡ್’ ವ್ಯವಸ್ಥೆಗೂ ಚಾಲನೆ ನೀಡಲಾಯಿತು. ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವಿರುವ ಈ ಡಿಜಿಟಲ್ ಪರದೆಯಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು, ಜನಪರ ಯೋಜನೆಗಳ ಪ್ರಗತಿ ಹಾಗೂ ಇತರ ಪ್ರಮುಖ ಅಂಕಿಅಂಶಗಳು ಲಭ್ಯವಿರಲಿವೆ. ಸಭೆಗಳ ಸಂದರ್ಭದಲ್ಲಿ ನಿಖರ ಮಾಹಿತಿಯೊಂದಿಗೆ ಚರ್ಚೆ ನಡೆಸಲು ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ:

ನೂತನ ಸಭಾಂಗಣದಲ್ಲಿ ಮೊದಲ ಉನ್ನತ ಮಟ್ಟದ ಸಭೆ

‘ಸಂಗಮ’ ಸಭಾಂಗಣ ಉದ್ಘಾಟನೆಗೊಂಡ ತಕ್ಷಣವೇ ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಸಲೀಂ ಅಹಮದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಿತೇಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಯ ಕುರಿತು ಈ ವೇಳೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.

Must Read

Skip to toolbar