November 21, 2026
Saturday, November 21, 2026
spot_img

ಮನೆಯಲ್ಲೇ ತಯಾರಿಸಿದ ನೂಡಲ್ಸ್‌ ತಿಂದು ಬಾಲಕಿ ಸಾ*ವು: ಅಕ್ಕ ಅಸ್ವಸ್ಥ, ಫುಡ್‌ ಪಾಯಿಸನ್‌ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ತಯಾರಿಸಿದ ನೂಡಲ್ಸ್‌ ಸೇವನೆ ಮಾಡಿದ ನಂತರ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಆಕೆಯ ಅಕ್ಕ ಅಸ್ವಸ್ಥಳಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಫುಡ್‌ ಪಾಯಿಸನಿಂಗ್‌ ಇರಬಹುದು ಎನ್ನಲಾಗಿದೆ. ನ.19ರಂದು ಈ ಘಟನೆ ನಡೆದಿದೆ. ಪೀಹು ಕುಮಾವತ್‌ ಹಾಗೂ ದಿವ್ಯಾಂಶಿ ಎಂಬ ಸಹೋದರಿಯರು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾವೇ ನೂಡಲ್ಸ್‌ ತಯಾರಿಸಿಕೊಂಡು ತಿಂದಿದ್ದಾರೆ. ನಂತರ ಇಬ್ಬರೂ ನಿದ್ದೆ ಮಾಡಿದ್ದಾರೆ.

ಮಧ್ಯಾಹ್ನ ಮೂರು ಗಂಟೆಗೆ ತಾಯಿ ಮನೆಗೆ ಬಂದಿದ್ದಾರೆ. ಈ ವೇಳೆ ದಿವ್ಯಾಂಶಿ ಅಸ್ವಸ್ಥಳಾಗಿದ್ದನ್ನು ತಾಯಿ ಗಮನಿಸಿದ್ದಾರೆ. ತಂಗಿ ಪೀಹು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಮಲಗಿದ್ದಾಳೆ. ತಕ್ಷಣವೇ ತಾಯಿ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಪೀಹು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ದಿವ್ಯಾಂಶಿ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಡಿಸ್ಚಾರ್ಜ್‌ ಮಾಡಲಾಗಿದೆ.

ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಾಲಕಿ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಬಾಲಕಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕರಧನಿ ಪೊಲೀಸರು ನೂಡಲ್ಸ್‌ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Must Read