ಹೊಸದಿಗಂತ ವರದಿ ಕಲಬುರಗಿ:
ವಿಶೇಷ ರೈಲುಗಳಲ್ಲಿ ಹೆಚ್ಚುವರಿ ವಾಣಿಜ್ಯ ನಿಲುಗಡೆಗಳನ್ನು ಒದಗಿಸುವ ಮೂಲಕ ಕಲಬುರಗಿಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸೋಲಾಪುರ ವಿಭಾಗವು ಮುಂದಾಗಿದೆ.
ಸೆಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗವು, ಕಲಬುರಗಿ ಜಂಕ್ಷನ್ (KLBG) ನಲ್ಲಿ ಮೂರು ವಿಶೇಷ ರೈಲುಗಳಿಗೆ ಹೆಚ್ಚುವರಿ ವಾಣಿಜ್ಯ ನಿಲುಗಡೆಗಳನ್ನು ಮಂಜೂರು ಮಾಡಿಸುವ ಮೂಲಕ, ಕಲಬುರಗಿಯ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಂಡಿದೆ.

ಈ ನಿಟ್ಟಿನಲ್ಲಿ, ಸೆಂಟ್ರಲ್ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳಿಗೆ ಕಲಬುರಗಿಯಲ್ಲಿ ವಾಣಿಜ್ಯ ನಿಲುಗಡೆಗಳನ್ನು ಒದಗಿಸಲು ಅನುಮೋದನೆ ನೀಡಿದೆ. ರೈಲು ಸಂಖ್ಯೆ 04005 – ಬೆಂಗಳೂರು ಕಾಂಟ್ – ನವದೆಹಲಿ ವಿಶೇಷ ರೈಲು ನವೆಂಬರ್ 24 ರಂದು ಬೆಂಗಳೂರು ಕಾಂಟ್ನಿಂದ ಹೊರಡುವ ಈ ರೈಲು, ಕಲಬುರಗಿಯಲ್ಲಿ ರಾತ್ರಿ 21:37 ರಿಂದ 21:40 ರವರೆಗೆ ನಿಲುಗಡೆ ಹೊಂದಲಿದೆ.
ಇದನ್ನೂ ಓದಿ:
ರೈಲು ಸಂಖ್ಯೆ 07087 – ಚರ್ಲಪಲ್ಲಿ – ಪ್ರತಾಪ್ ನಗರ ವಿಶೇಷ ರೈಲು ನವೆಂಬರ್ 21 ರಂದು ಚರ್ಲಾಪಲ್ಲಿಯಿಂದ ಹೊರಡುವ ಈ ರೈಲು, ಕಲಬುರಗಿಯಲ್ಲಿ ರಾತ್ರಿ 21:40 ರಿಂದ 21:43 ರವರೆಗೆ ನಿಲುಗಡೆ ಹೊಂದಲಿದೆ. ರೈಲು ಸಂಖ್ಯೆ 07088 – ಪ್ರತಾಪ್ ನಗರ – ಚರ್ಲಪಲ್ಲಿ ವಿಶೇಷ ರೈಲು ನವೆಂಬರ್ 22 ರಂದು ಪ್ರತಾಪ್ ನಗರದಿಂದ ಹೊರಡುವ ಈ ರೈಲು, ಕಲಬುರಗಿಯಲ್ಲಿ ಮಧ್ಯಾಹ್ನ 14:37 ರಿಂದ 14:40 ರವರೆಗೆ ನಿಲುಗಡೆ ಹೊಂದಲಿದೆ.
ಸೋಲಾಪುರ ವಿಭಾಗವು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸಲು ಮತ್ತು ತನ್ನ ವ್ಯಾಪ್ತಿಯಲ್ಲಿ ರೈಲು ಸಂಪರ್ಕವನ್ನು ಬಲಪಡಿಸಲು ಬದ್ಧವಾಗಿದೆ.
ಸೆಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗವು, ಪ್ರಯಾಣಿಕರ ಹಿತಾಸಕ್ತಿಗೆ ಆದ್ಯತೆ ನೀಡುವ ಸೇವೆಗಳನ್ನು ಒದಗಿಸಲು ಹಾಗೂ ಉತ್ತಮ ರೈಲು ಸಂಪರ್ಕ ಮತ್ತು ಪ್ರಯಾಣ ಸೌಲಭ್ಯಗಳನ್ನು ಕಲ್ಪಿಸಲು ನಿರಂತರವಾಗಿತ್ತಿದೆ.



