ಪ್ರೀತಿ ಎನ್ನುವುದು ಎರಡು ಹೃದಯಗಳನ್ನು ಒಂದಾಗಿಸುವ ಅತ್ಯಂತ ಮಧುರ ಭಾವನೆ. ಆದರೆ, ಪ್ರೀತಿಯ ಪ್ರಪೋಸಲ್ ವಿಷಯ ಬಂದಾಗ ಹೆಚ್ಚಿನ ಸಂದರ್ಭಗಳಲ್ಲಿ ಹುಡುಗರೇ ಮೊದಲು ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ. ಹೆಣ್ಮಕ್ಕಳಿಗೂ ಪ್ರೀತಿ ಇರುವುದಾದರೂ, ಅವರು ತಮ್ಮ ಹೃದಯದ ಮಾತನ್ನು ತಕ್ಷಣ ಹೇಳಲು ಹಿಂಜರಿಯುತ್ತಾರೆ. ಈ ಸಾಮಾಜಿಕ ಹಾಗೂ ಮಾನಸಿಕ ಕಾರಣಗಳ ಹಿಂದೆ ಹಲವು ಆಸಕ್ತಿದಾಯಕ ಅಂಶಗಳಿವೆ.
ಪ್ರೀತಿ ನಿವೇದನೆ ಮಾಡುವಾಗ ನಿರಾಕರಣೆ ಸಿಗಬಹುದೆಂಬ ಭಯ ಹುಡುಗಿಯರಲ್ಲಿ ಹೆಚ್ಚಾಗಿರುತ್ತದೆ. ತಮ್ಮ ಹೃದಯದ ಮಾತಿಗೆ ಪ್ರತಿಕ್ರಿಯೆ ಸಿಗದಿದ್ದರೆ ಅದನ್ನು ಅವರು ದೊಡ್ಡ ಆಘಾತವೆಂದು ಭಾವಿಸುತ್ತಾರೆ. ಜೊತೆಗೆ, ಹುಡುಗನಿಗೆ ಪ್ರಪೋಸ್ ಮಾಡಿದರೆ ಆತ ತಮ್ಮನ್ನು ಹೇಗೆ ನೋಡಿಕೊಳ್ಳುವನು ಎಂಬ ಅನುಮಾನವೂ ಅವರನ್ನು ಕಾಡುತ್ತದೆ.
ಇನ್ನೊಂದು ಕಾರಣವೆಂದರೆ ಹುಡುಗಿಯರು ತಮ್ಮನ್ನು ವಿಶೇಷವಾಗಿ ಭಾವಿಸಿಕೊಳ್ಳಲು ಬಯಸುತ್ತಾರೆ. ತಮಗೆ ಪ್ರೀತಿಯ ಪ್ರಪೋಸಲ್ ಬರಬೇಕು, ತಮ್ಮ ಆದ್ಯತೆ ತೋರಿಸಬೇಕು ಎಂಬ ಅಂತರಂಗದ ಆಸೆ ಅವರನ್ನು ಪ್ರಪೋಸ್ ಮಾಡುವುದರಿಂದ ತಡೆಯುತ್ತದೆ. ಅದೇ ರೀತಿ, ಮೊದಲು ಪ್ರಪೋಸ್ ಮಾಡಿದರೆ “ಬೋಲ್ಡ್” ಅಥವಾ “ಹತಾಶ” ಎಂಬ ಟ್ಯಾಗ್ ಅಂಟಿಸಿಕೊಳ್ಳುವ ಭಯವೂ ಅನೇಕರ ಮನಸ್ಸಿನಲ್ಲಿ ಇರುತ್ತದೆ.
ಸಮಾಜದಲ್ಲಿ ಹುಡುಗ ಪ್ರೀತಿಯನ್ನು ಹೊರಹಾಕಿದರೆ ಅದನ್ನು ರೊಮ್ಯಾಂಟಿಕ್ ಎಂದು ನೋಡಲಾಗುತ್ತದೆ. ಆದರೆ ಹುಡುಗಿ ಅದೇ ಕೆಲಸ ಮಾಡಿದರೆ ಅಸಮಂಜಸ ಟ್ಯಾಗ್‌ಗಳು ಸಿಗುವ ಸಂಭವ ಹೆಚ್ಚಿರುತ್ತದೆ. ಈ ಕಾರಣಗಳಿಂದಾಗಿ ಹುಡುಗಿಯರು ತಮ್ಮ ಪ್ರೀತಿಯನ್ನು ನೇರವಾಗಿ ಹೇಳುವುದಕ್ಕಿಂತ ಸುಳಿವುಗಳ ಮೂಲಕ ವ್ಯಕ್ತಪಡಿಸಲು ಹೆಚ್ಚು ಇಷ್ಟಪಡುತ್ತಾರೆ.
ಒಟ್ಟಿನಲ್ಲಿ, ಪ್ರೀತಿ ಹೇಳುವುದರಲ್ಲಿ ಲಿಂಗ ಭೇದ ಇರಬಾರದು. ಕಾಲ ಬದಲಾಗುತ್ತಿರುವಂತೆ ಇಂದಿನ ಹೆಣ್ಮಕ್ಕಳು ತಮ್ಮ ಭಾವನೆಗಳನ್ನು ಹೊರಹಾಕಲು ಹಿಂಜರಿಯದೆ ಮುಂದೆ ಬರುತ್ತಿದ್ದಾರೆ. ಆದರೂ, ಸಮಾಜದ ನೋಟಗಳು ಹಾಗೂ ಭಯಗಳು ಇನ್ನೂ ಅನೇಕರನ್ನು ಹಿಮ್ಮೆಟ್ಟಿಸುತ್ತಿವೆ. ಪ್ರೀತಿಯ ನಿಜವಾದ ಸೌಂದರ್ಯ ಅಂದ್ರೆ ಮನದಾಳದ ಭಾವನೆಗಳನ್ನು ಸತ್ಯವಾಗಿ ಹಂಚಿಕೊಳ್ಳುವುದಲ್ಲವೇ?