November 26, 2026
Thursday, November 26, 2026
spot_img

ಸಾಲ ಪಡೆಯದಿದ್ದರೂ ₹6.29 ಲಕ್ಷ ಪಾವತಿಸಿದ ಮಹಿಳೆ: ಲೋನ್ ಆ್ಯಪ್ ಹೆಸರಲ್ಲಿ ವಂಚನೆ!

ಹೊಸದಿಗಂತ ವರದಿ ಕಾರವಾರ:

ಆನ್ ಲೈನ್ ಮೊಬೈಲ್ ಆಪ್ಲಿಕೇಷನ್ ಮೊಬೈಲ್ ಪೋನಿನಲ್ಲಿ ಸ್ಥಾಪಿಸಿದ ಮಹಿಳೆಯೋರ್ವರಿಗೆ ಅವರು ಯಾವುದೇ ಸಾಲ ಪಡೆಯದಿದ್ದರೂ ಸಾಲ ಪಡೆದಿರುವುದಾಗಿ ಮಾನಸಿಕ ಹಿಂಸೆ ನೀಡಿ ಸುಮಾರು 6.29 ಲಕ್ಷ ರೂಪಾಯಿ ಜಮಾ ಮಾಡಿಸಿಕೊಂಡು ವಂಚನೆ ಮಾಡಿರುವ ಘಟನೆ ನಡೆದಿದ್ದು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿದ್ದಾಪುರ ತಾಲೂಕಿನ ಮಹಿಳೆಯೊಬ್ಬರು ಆನ್ ಲೈನ್ ಲೋನ್ ಆಫ್ ವಂಚಕರಿಂದ ಮೋಸ ಹೋಗಿದ್ದು ಅವರು ಈ ವರ್ಷದ ಜೂನ್ 1 ರಂದು ಸಾಮಾಜಿಕ ಜಾಲತಾಣದ ಮೂಲಕ ಫೂರ್ಟಿಲಾ ರುಪೀ ಎನ್ನುವ ಲೋನ್ ಆಪ್ ಮೇಲೆ ಕ್ಲಿಕ್ ಮಾಡಿದಾಗ ಅವರ ಮೊಬೈಲ್ ಪೋನಗಳಿಗೆ ಬಂದ ಸಂದೇಶಗಳಿಗೆ ಪ್ರತಿಕ್ರಿಯಿಸಿದಾಗ ಅವರ ಮೊಬೈಲ್ ನಲ್ಲಿ ಟೈಮ್ ಲೀ ಕ್ಯಾಶ್ ಎಂಬ ಹೆಸರಿನ ಲೋನ್ ಆಫ್ ವ್ಯಾಲೇಟ್ ಡೌನ್ ಲೋಡ್ ಆಗಿದ್ದು 3 ಸಾವಿರ ರೂಪಾಯಿ ಸಾಲ ಮಂಜೂರು ಆಗಿರುವುದಾಗಿ ಆಪ್ಲಿಕೇಶನ್ ನಲ್ಲಿ ನಮೂದಾಗಿದೆ.

ಜೂನ್ 3 ರಂದು ವಿದೇಶದ ಮೊಬೈಲ್ ಸಂಖ್ಯೆಯಿಂದ ವ್ಯಕ್ತಿಯೋರ್ವ ಲೋನ್ ಆಫ್ ಕಂಪನಿಯೊಂದ ಕರೆ ಮಾಡುತ್ತಿರುವುದಾಗಿ ಹೇಳಿ ಆಫ್ ಮೂಲಕ ಪಡೆದ ಸಾಲ ಬಡ್ಡಿ ಸೇರಿ 32 ಸಾವಿರ ಆಗಿರುವುದಾಗಿ ತಿಳಿಸಿದ್ದು ಮಹಿಳೆ ತಾವು ಯಾವುದೇ ಸಾಲ ಪಡೆದಿಲ್ಲ ಎಂದು ಹೇಳಿದ್ದಾರೆ,ನಂತರ ಆರೋಪಿತರು ಮಹಿಳೆಗೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಸಾಲದ ಬಡ್ಡಿಹಣ ಕಟ್ಟದಿದ್ದರೆ ಮಹಿಳೆಯ ಮೊಬೈಲ್ ಪೋನಿನಲ್ಲಿ ಇರುವ ಎಲ್ಲಾ ಸಂಖ್ಯೆಗಳಿಗೆ ಸಾಲ ಕಟ್ ಬಾಕಿ ಇರುವ ಕುರಿತಂತೆ ಸಂದೇಶ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ.

ನಂತರ ವಂಚಕರು ಪ್ರತಿದಿನ ಮಹಿಳೆಗೆ ಹಣ ತುಂಬುವಂತೆ ಮಾನಸಿಕ ಹಿಂಸೆ ನೀಡಿದ್ದು ಮತ್ತು ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ಮಹಿಳೆ ಜೂನ್ 3 ರಿಂದ ಅಕ್ಟೋಬರ್ 21 ರ ನಡುವಿನ ಅವಧಿಯಲ್ಲಿ ವಂಚಕರು ತಿಳಿಸಿರುವ ಯು.ಪಿ.ಐ ಮತ್ತು ಬ್ಯಾಂಕ್ ಖಾತೆಗಳಿಗೆ 6,28,898 ರೂಷಾಯಿಗಳನ್ನು ಜಮಾ ಮಾಡಿದ್ದು ಇದೀಗ ತಮಗೆ ಆಗಿರುವ ಮೋಸದ ಕೃತ್ಯದ ಕುರಿತು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆನ್ ಲೈನ್ ಸುಲಭ ಸಾಲ ನೀಡುವುದಾಗಿ ಸಾವಿರಾರು ಲೋನ್ ಆಫ್ ಗಳು ಕಾನೂನು ಬಾಹಿರವಾಗಿ ಹುಟ್ಟಿಕೊಂಡಿದ್ದು ಅಸಹಾಯಕರನ್ನು ವಂಚಿಸುವುದೇ ಇವರ ಕೆಲಸವಾಗಿದೆ, ಆಫ್ ಡೌನ್ ಲೋಡ್ ಮಾಡಿ ಅವರ ಷರತ್ತುಗಳಿಗೆ ಒಪ್ಪಿಗೆ ನೀಡುತ್ತಿದ್ದಂತೆ ಮೊಬೈಲ್ ಪೋನಿನಲ್ಲಿ ಇರುವ ಎಲ್ಲಾ ಸಂಪರ್ಕ ಸಂಖ್ಯೆಗಳು, ಪೋಟೋ,ವಿಡಿಯೋಗಳು ವಂಚಕರ ಕೈಸೇರುತ್ತವೆ. ಪೋನಿನಲ್ಲಿರುವ ಪೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಲ ಪಡೆದವರಿಗೆ ಮಾನಸಿಕ ಹಿಂಸೆ ನೀಡುವ ಮೂಲಕ ಹಣಗಳಿಸುವ ಇವರ ಮೋಸದ ಜಾಲಕ್ಕೆ ದೇಶಾದ್ಯಂತ ಜನರು ಬಲಿ ಬೀಳುತ್ತಲಿದ್ದು ಅದೆಷ್ಟೋ ಜನರು ಆತ್ಮಹತ್ಯೆಯಂತ ಮಾರ್ಗ ಹಿಡಿದಿದ್ದಾರೆ.

Must Read