March 31, 2026
Tuesday, March 31, 2026
spot_img

ನಾಳೆ ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ: ಯಾವ ರಾಶಿಗೆ ಶುಭ?

ನಾಳೆ ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ ಘಟಿಸಲಿದೆ. 15 ದಿನಗಳ ಅಂತರದಲ್ಲಿ ಇದು 2ನೇ ಗ್ರಹಣವಾಗಿದ್ದು, ಇದರ ಪ್ರಭಾವ ಹೇಗಿರಲಿದೆ ಎಂಬ ಪ್ರಶ್ನೆ ಮೂಡಿದೆ.ಭಾನುವಾರ ಅಮಾವಾಸ್ಯೆ ಪಿತೃಪಕ್ಷವಿದೆ. ಗ್ರಹಣ ದಿನ ಶ್ರಾದ್ಧ ಕಾರ್ಯ ಮಾಡಬಹುದಾ? ಗ್ರಹಣ ಸೂರ್ಯನಿಂದ ಜಗತ್ತಿನಲ್ಲಿ ಸಂಘರ್ಷ ಹೆಚ್ಚಾಗಲಿದೆಯೇ ಎಂಬ ಬಗ್ಗೆಯೂ ಜನರಲ್ಲಿ ಗೊಂದಲ ಇದೆ.

ಮೂರು ತಿಂಗಳ ಕಾಲ ಗ್ರಹಣ ಪ್ರಭಾವ ಇರಲಿದೆ. ಗ್ರಹಣ ನಂತರ 18 ದಿನ ಸಾಕಷ್ಟು ಜಾಗೃತಿ ಅವಶ್ಯಕ. ಗ್ರಹಗತಿಗಳ ಮೇಲೂ ಗ್ರಹಣ ಸೂರ್ಯನ ಪ್ರಭಾವ ಇರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ರಾಶಿಗಳ ಫಲಾಫಲ

ಮೇಷ: ಗ್ರಹಣದಿಂದ ದುಷ್ಪರಿಣಾಮ ಇಲ್ಲ. ಗ್ರಹಣದಿಂದ ಶುಭಫಲ.

ವೃಷಭ: ಗ್ರಹಣದಿಂದ ಅಶುಭ ಫಲ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ, ಆರೋಗ್ಯದ ಕಡೆಗೆ ಗಮನ ಕೊಡಿ.

ಮಿಥುನ: ಗ್ರಹಣದಿಂದ ಮಿಶ್ರಫಲ.

ಕಟಕ: ಆರ್ಥಿಕ ಸ್ಥಿತಿ ಏರುಪೇರು, ಕೌಂಟುಬಿಕ ಕಲಹ.

ಸಿಂಹ: ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ಉದ್ಯೋಗ ನಷ್ಟ ಸಾಧ್ಯತೆ.

ಕನ್ಯಾ: ನಿದ್ರಾಭಂಗ ಸಾಧ್ಯತೆ, ಹೂಡಿಕೆಯಲ್ಲಿ ನಷ್ಟ ಸಾಧ್ಯತೆ, ನಂಬಿ ಹಣ ಕಳೆದುಕೊಳ್ಳುವ ಸ್ಥಿತಿ.

ತುಲಾ: ವ್ಯವಹಾರದಲ್ಲಿ ಜಾಗೃತಿ ವಹಿಸಿ, ಮಿತ್ರರು ದೂರವಾಗುವ ಸ್ಥಿತಿ, ಮಾಟ-ಮಂತ್ರದ ಆತಂಕ, ವಾಹನ ಚಾಲನೆಯಲ್ಲಿ ಎಚ್ಚರ.

ವೃಶ್ಚಿಕ: ಅಧಿಕಾರಿಗಳಿಂದ ಒತ್ತಡದ ಸ್ಥಿತಿ ನಿರ್ಮಾಣ, ಆರೋಗ್ಯದ ವಿಚಾರದಲ್ಲಿ ಜಾಗೃತಿ, ಗ್ರಹಣದಿಂದ ಮಿಶ್ರ ಫಲ.

ಧನಸ್ಸು: ತಂದೆ ಆರೋಗ್ಯದ ಕಡೆ ಗಮನ ಕೊಡಿ, ಕೆಲಸ ಕಾರ್ಯಗಳಲ್ಲಿ ಪೂರ್ವತಯಾರಿ ಅಗತ್ಯ.

ಮಕರ: ವೃತ್ತಿ ದೋಷ ಕಾಡುವ ಸಾಧ್ಯತೆ, ಅನಿರೀಕ್ಷಿತ ಅಪವಾದ.. ನಿಂದನೆ.

ಕುಂಭ: ಸಂಗಾತಿ ಆರೋಗ್ಯದ ಕಡೆ ಗಮನ ಕೊಡಿ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ.

ಮೀನ: ಆರೋಗ್ಯದ ವಿಚಾರದಲ್ಲಿ ಎಚ್ಚರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !