ಮಕ್ಕಳ ಆರೈಕೆಯ ಪ್ರಮುಖ ಭಾಗವಾಗಿ ಡೈಪರ್ ಗಳು ಬಳಕೆಯಾಗುತ್ತವೆ. ವಿಶೇಷವಾಗಿ ರಾತ್ರಿಯ ಸಮಯದಲ್ಲಿ, ಪ್ರಯಾಣದಲ್ಲಿ ಅಥವಾ ಮಕ್ಕಳ ಹೊರಗಡೆ ಇರುವ ಸಂದರ್ಭದಲ್ಲಿ ಡೈಪರ್ ಆರಾಮದಾಯಕ ಆಯ್ಕೆ. ಆದರೆ, ಅವುಗಳನ್ನು ಸರಿಯಾಗಿ ಬಳಸದಿದ್ದರೆ, rashes ದದ್ದುಗಳು, ಚರ್ಮದ ಉರಿಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಪೋಷಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಮತ್ತು ನಿಯಮಿತವಾಗಿ ಡೈಪರ್ ಬದಲಾಯಿಸುವುದು, ಗುಣಮಟ್ಟದ ವಸ್ತುಗಳನ್ನು ಬಳಸಿ ಮಕ್ಕಳ ಚರ್ಮವನ್ನು ಸುರಕ್ಷಿತವಾಗಿ ಕಾಪಾಡುವುದು ಅತ್ಯಂತ ಮುಖ್ಯ.

ಎಷ್ಟು ಬಾರಿ ಬದಲಾಯಿಸಬೇಕು?
ಮಕ್ಕಳಿಗೆ ಡೈಪರ್ ಅನ್ನು ಪ್ರತಿ ಮೂರು ಗಂಟೆಗಳಿಗೊಮ್ಮೆ ಬದಲಾಯಿಸುವುದು ಉತ್ತಮ. ಹೀಗಾಗಿ ಚರ್ಮ ಹದಗೆಡದಂತೆ ಮತ್ತು ಮೂತ್ರದ ಸಂಗ್ರಹದಿಂದ ಉಂಟಾಗುವ ತೊಂದರೆಗಳು ತಪ್ಪಿಸಿಕೊಳ್ಳಬಹುದು. ವಿಶೇಷವಾಗಿ, ರಾತ್ರಿ ವೇಳೆ ಅಥವಾ ಪ್ರಯಾಣದ ಸಂದರ್ಭದಲ್ಲಿ ಕೂಡ, ಅಗತ್ಯವಾದರೆ ಡೈಪರ್ ತಕ್ಷಣ ಬದಲಾಯಿಸಬೇಕು. ಮಕ್ಕಳಿಗೆ 18–20 ತಿಂಗಳ ವಯಸ್ಸಿನವರೆಗೆ ಡೈಪರ್ ಬಳಸಬಹುದು, ಗರಿಷ್ಠ 2 ವರ್ಷವರೆಗೂ ತಜ್ಞರ ಸಲಹೆಯಂತೆ ಮುಂದುವರಿಸಬಹುದು.

ಡೈಪರ್ ಬಳಕೆಯಲ್ಲಿ ಮುನ್ನೆಚ್ಚರಿಕೆಗಳು
ಗಾಳಿಗೆ ಅವಕಾಶ ನೀಡಿರಿ: ಡೈಪರ್ ತೆಗೆದ ನಂತರ ಮಕ್ಕಳ ಅಂಗಗಳನ್ನು ಸ್ವಲ್ಪ ಸಮಯ ಗಾಳಿ ಮತ್ತು ಬೆಳಕಿಗೆ ಒಡ್ಡುವುದು ಉತ್ತಮ.
ತೊಳೆಯುವ ವಿಧಾನ: ಹತ್ತಿ ಬಟ್ಟೆಯನ್ನು ಬಿಸಿ ನೀರಿನಲ್ಲಿ ಒದ್ದೆ ಮಾಡಿ ಒರಸಿ. ವೈಪ್ ಬಳಕೆ ಕಡಿಮೆ ಮಾಡಿ.
ಕ್ರೀಮ್ ಬಳಕೆ: ದದ್ದು ಅಥವಾ ಚರ್ಮದ ರೋಗಗಳ ತಡೆಗೆ ಸೂಕ್ತವಾದ ಬೇಬಿ ಕ್ರೀಮ್ ಹಚ್ಚುವುದು ಉತ್ತಮ.
ಗುಣಮಟ್ಟದ ಡೈಪರ್: ಕಾಟನ್ ಡೈಪರ್ ಗಾಳಿಯ ಪರಿಚಲನೆಯನ್ನು ಒದಗಿಸುತ್ತದೆ. ಆದರೆ ತುಂಬಾ ಸಡಿಲ ಅಥವಾ ತುಂಬಾ ಬಿಗಿಯಾದ ಡೈಪರ್ ಹಾಕಬಾರದು.
ಮೂತ್ರ ವಿಸರ್ಜನೆ ಅಭ್ಯಾಸ: ಮಕ್ಕಳಿಗೆ 2 ವರ್ಷ ತುಂಬಿದ ನಂತರ ಡೈಪರ್ ಬಿಟ್ಟು ಸ್ವತಃ ಮೂತ್ರ ವಿಸರ್ಜನೆ ಅಭ್ಯಾಸ ಕಲಿಸುವುದು ಆರೋಗ್ಯಕ್ಕೆ ಅನುಕೂಲ.
