September 21, 2026
Monday, September 21, 2026
spot_img

VIRAL | ನಮಗೇ ಜೋರ್‌ ಮಾಡ್ತೀರಾ ಎಂದು ಶಿಕ್ಷಕಿಗೇ ಹೊಡೆದ ಹತ್ತನೇ ತರಗತಿ ಹುಡುಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಿನ ಕಾಲದ ಮಕ್ಕಳು ಯಾರಿಗೂ ಹೆದರೋದಿಲ್ಲ. ಮನೆಯಲ್ಲಿ ಯಾರಿಗೂ ಭಯ ಪಡೋದಿಲ್ಲ ಎಂದು ಶಾಲೆಗೆ ಕಳಿಸಿದರೆ ಶಾಲೆಯಲ್ಲಿ ಟೀಚರ್ಸ್‌ ಮಾತು ಕೇಳದ ಮಟ್ಟಿಗೆ ಬೆಳೆದಿದ್ದಾರೆ. ಒಂದೇಟು ಕೊಟ್ಟರೂ ಪರವಾಗಿಲ್ಲ ಬುದ್ಧಿ ಕಲಿಸಿ ಎಂದು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಈಗಿನ ಮಕ್ಕಳು ಶಿಕ್ಷಕರಿಗೇ ಹೊಡೆಯುವ ಮಟ್ಟಕ್ಕೆ ಬಂದಿದ್ದಾರೆ.

ಆಂಧ್ರಪ್ರದೇಶದ ವೀರವಳ್ಳಿಯ ಶಾಲೆಯೊಂದರಲ್ಲಿ ಹತ್ತನೇ ತರಗತಿಯ ಹುಡುಗರು ಬೈದಿದ್ದಕ್ಕೆ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹದ್ದು ಮೀರಿದ ನಡೆವಳಿಕೆ ತೋರಿದ ಹುಡುಗರು ಟೀಚರ್‌ ಮಾತಿಗೆ ಕೋಪಗೊಂಡು ಹಲ್ಲೆ ಮಾಡಿದ್ದಾರೆ. ಇದೀಗ ಶಾಲೆಯಿಂದ ಸಸ್ಪೆಂಡ್‌ ಆದರೆ ಅವರ ಭವಿಷ್ಯಕ್ಕೆ ಕಪ್ಪುಚುಕ್ಕಿಯಾಗಲಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಂಥ ಮಕ್ಕಳಿಗೆ ತಕ್ಕ ಪಾಠ ಕಲಿಸಿ, ಈ ರೀತಿ ಮಾಡಿದರೆ ಏನೂ ಆಗೋದಿಲ್ಲ ಎಂದುಕೊಳ್ಳುವ ಅವರ ಸೊಕ್ಕನ್ನು ಅಡಗಿಸಿ. ಇನ್ಯಾವ ವಿದ್ಯಾರ್ಥಿಗಳೂ ಹೀಗೆ ಮಾಡದಂತೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !