ಕೇಕ್ ತಿನ್ನುವುದು ಮಕ್ಕಳಿಗೂ, ದೊಡ್ಡವರಿಗೂ ಖುಷಿ ಕೊಡುವ ವಿಚಾರ. ಅದಕ್ಕೆ ಪಾರ್ಟಿ, ಬರ್ತ್‌ಡೇ ಅಥವಾ ಆ್ಯನಿವರ್ಸರಿಯಂದೇನೂ ಇರಬೇಕೆಂಬುದಿಲ್ಲ. ಆದರೆ ಪ್ರತೀ ಬಾರಿ ದುಬಾರಿ ಕೇಕ್ ಖರೀದಿಸುವುದು ಕಷ್ಟ. ಅದಕ್ಕೆ ಮನೆಯಲ್ಲೇ ಕೇವಲ ಕೆಲವೇ ಸಾಮಗ್ರಿಗಳಿಂದ ಮಾಡಬಹುದಾದ ಕೆಟೊ ಮಗ್ ಕೇಕ್ ಒಂದು ಸರಳ ಹಾಗೂ ಟೇಸ್ಟಿ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 3
ಸ್ವೀಟ್ನರ್ – 3 ಚಮಚ
ಕೋಕೋ ಪೌಡರ್ – 6 ಚಮಚ
ತುಪ್ಪ ಅಥವಾ ಬೆಣ್ಣೆ – ಸ್ವಲ್ಪ (ಮಗ್‌ಗೆ ಸವರಲು)
ಮಾಡುವ ವಿಧಾನ:
ಮೊದಲು ಒಂದು ಗಾಜಿನ ಗ್ಲಾಸ್ ಅಥವಾ ಮಗ್ ತೆಗೆದುಕೊಂಡು ಅದರ ಒಳಭಾಗಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿ. ಒಂದು ಬೌಲ್‌ನಲ್ಲಿ ಮೊಟ್ಟೆ ಒಡೆದು ಹಾಕಿ, ಅದಕ್ಕೆ ಸ್ವೀಟ್ನರ್ ಮತ್ತು ಕೋಕೋ ಪೌಡರ್ ಸೇರಿಸಿ. ಮಿಶ್ರಣ ಗಂಟು ಬೀಳದಂತೆ ಚೆನ್ನಾಗಿ ಕಲಸಿ.
ಈಗ ಈ ಮಿಶ್ರಣವನ್ನು ಸವರಿದ ಮಗ್‌ಗೆ ಹಾಕಿ. ಮೈಕ್ರೋ ಓವನ್‌ನಲ್ಲಿ ಕೇವಲ 45 ಸೆಕೆಂಡ್ ಬೇಯಿಸಿಕೊಳ್ಳಿ. ಬಿಸಿಬಿಸಿಯಾದ ಕೆಟೊ ಮಗ್ ಕೇಕ್ ಸವಿಯಲು ಸಿದ್ಧ.