May 18, 2026
Monday, May 18, 2026
spot_img

ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಅಫ್ಘಾನಿಸ್ತಾನದಿಂದ ಪ್ರತೀಕಾರದ ಡ್ರೋನ್ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಘ್ಪಾನ್ ರಾಜಧಾನಿ ಕಾಬೂಲ್‌ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಪಾಕಿಸ್ತಾನ ವೈಮಾನಿಕ ಬಾಂಬ್‌ ದಾಳಿಗೆ ಅಫ್ಘಾನಿಸ್ತಾನ ತಿರುಗೇಟು ನೀಡಿದ್ದು, ಪಾಕಿಸ್ತಾನ ಖೈಬರ್ ಪಖ್ತುನ್ಖ್ವಾದ ಕೊಹಾತ್ ಪ್ರದೇಶದಲ್ಲಿರುವ ಪಾಕ್ ಸೇನೆಯ ಕಾರ್ಯತಂತ್ರದ ಮಿಲಿಟರಿ ಕೇಂದ್ರಗಳು ಮತ್ತು ನೆಲೆಗಳ ಮೇಲೆ ಶುಕ್ರವಾರ ಪ್ರತೀಕಾರದ ಡ್ರೋನ್ ದಾಳಿ ನಡೆಸಿದೆ.

ಈ ಕುರಿತು ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಯುದ್ಧ ಕಮಾಂಡ್ ಕೇಂದ್ರವಾದ ಪಾಕಿಸ್ತಾನದ ಕೊಹಾತ್ ಮಿಲಿಟರಿ ಕೋಟೆ ಮತ್ತು ಕೋಟೆಯ ಕಮಾಂಡರ್ ಕಚೇರಿಗೆ ಗಮನಾರ್ಹ ಹಾನಿಯಾಗಿದೆ ಎಂದು ಪೋಸ್ಟ್‌ ಮಾಡಿದೆ.

ಕೋಟೆಯ ಮಿಲಿಟರಿ ನೆಲೆಗಳು, ಕಮಾಂಡ್ ಸೆಂಟರ್, ಡಿಪೋಗಳು ಮತ್ತು ಸೈನಿಕರ ವಸತಿ ಆವರಣಗಳನ್ನು ನಾಶ ಮಾಡಲಾಗಿದೆ. ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ ಮತ್ತು ಭಾರಿ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !