Monday, September 22, 2025

HEALTH | ಫ್ಯಾಟಿ ಲೀವರ್ ನಿಂದ ಏನೆಲ್ಲಾ ಸಮಸ್ಯೆ ಬರುತ್ತೆ? ಇದನ್ನು ತಡೆಯುವುದು ಹೇಗೆ?

ಫ್ಯಾಟಿ ಲೀವರ್ ಎಂದಾಗ ತಕ್ಷಣವೇ ಜನರು ಇದನ್ನು ಕೇವಲ ಮದ್ಯಪಾನದ ಪರಿಣಾಮವೆಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲೀವರ್ ಕೇವಲ ಮದ್ಯಪಾನದಿಂದ ಉಂಟಾಗುವುದಿಲ್ಲ. ಸ್ಥೂಲಕಾಯ, ಮಧುಮೇಹ, ಅತಿಯಾದ ಸಕ್ಕರೆ ಸೇವನೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿಂದ ಇದು ಉಂಟಾಗಬಹುದು. ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ, ಲಿವರ್ ಫೆಲ್ಯೂವರ್ ಅಥವಾ ಲಿವರ್ ಕ್ಯಾನ್ಸರ್ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಫ್ಯಾಟಿ ಲೀವರ್ ತಡೆಯಲು ಪ್ರಮುಖ ಕ್ರಮಗಳು:

ನಿಯಮಿತ ವ್ಯಾಯಾಮ – ದಿನಕ್ಕೆ ಕನಿಷ್ಟ 30 ನಿಮಿಷ ವ್ಯಾಯಾಮ ನಡೆಸುವುದರಿಂದ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತು ಇನ್ಸೂಲಿನ್ ಸೆನ್ಸಿಟಿವಿಟಿಯನ್ನು ಸುಧಾರಿಸುತ್ತದೆ.

ಆಹಾರ ನಿಯಂತ್ರಣ – ಸಂಸ್ಕರಿಸಿದ ಆಹಾರ, ಹೆಚ್ಚು ಸಕ್ಕರೆ ಇರುವ ಆಹಾರ ಕಡಿಮೆ ಮಾಡಬೇಕು; ಹಣ್ಣು, ತರಕಾರಿ, ಕಾಳುಗಳು ಮತ್ತು ಫೈಬರ್ ಸೌಮ್ಯ ಆಹಾರ ಸೇವನೆ ಉತ್ತಮ.

ಮಿತಿಯಾದ ಮದ್ಯಪಾನ – ಮದ್ಯಪಾನ ನಿಯಂತ್ರಣ ಅಥವಾ ಸಂಪೂರ್ಣ ವಿರಾಮವು ಲಿವರ್ ಆರೋಗ್ಯವನ್ನು ಉಳಿಸುತ್ತದೆ.

ನಿತ್ಯ ನೀರು ಸೇವನೆ – ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗಿ, ಟಾಕ್ಸಿನ್ ನಿರ್ವಹಣೆ ಉತ್ತಮವಾಗುತ್ತದೆ.

ಇದನ್ನೂ ಓದಿ