Monday, September 22, 2025

FOOD | ಸುವರ್ಣಗಡ್ಡೆಯ ಅದ್ಭುತ ರುಚಿಯ ಗ್ರೇವಿ ಸವಿದಿದ್ದೀರಾ? ಇಲ್ಲಿದೆ ರೆಸಿಪಿ

ಸುವರ್ಣಗಡ್ಡೆ ನಮ್ಮ ಅಡುಗೆಮನೆಗೆ ಪೌಷ್ಟಿಕತೆ ಜೊತೆಗೆ ವಿಶೇಷ ರುಚಿಯನ್ನು ತಂದುಕೊಡಬಲ್ಲ ಒಂದು ಗೆಡ್ಡೆ ತರಕಾರಿ. ಇದು ಭೂಮಿಯಲ್ಲಿ ಬೆಳೆಯುವ ಬೇರು ತರಕಾರಿ. ವಿಶೇಷವೆಂದರೆ, ಇದರ ಬೇರು ಉಳಿದು ಮುಂದಿನ ಋತುವಿನಲ್ಲಿ ಮತ್ತೆ ಬೆಳೆಯುತ್ತದೆ. ಆದ್ದರಿಂದ ಇದನ್ನು ಸಮೃದ್ಧಿ ಮತ್ತು ಮಂಗಳಕಾರಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವತ್ತು ಈ ಸುವರ್ಣಗಡ್ಡೆ ಯಿಂದ ಒಳ್ಳೆಯ ಗ್ರೇವಿ ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

ಸುವರ್ಣಗಡ್ಡೆ – ½ ಕೆಜಿ
ಟೊಮೆಟೊ ಪ್ಯೂರಿ – 3
ಮೊಸರು – 1 ಕಪ್
ದಾಲ್ಚಿನ್ನಿ ಸೊಪ್ಪು – 1
ಜೀರಿಗೆ – ½ ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ¼ ಟೀಸ್ಪೂನ್
ಗರಂ ಮಸಾಲೆ – ½ ಟೀಸ್ಪೂನ್
ಒಣ ಮಾವಿನ ಪುಡಿ – 2 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಹುರಿಯಲು ಬೇಕಾದಷ್ಟು
ಕೊತ್ತಂಬರಿ ಸೊಪ್ಪು – ¼ ಕಪ್

ಮಾಡುವ ವಿಧಾನ:

ಮೊದಲಿಗೆ ಸುವರ್ಣಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು, ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ಒಣ ಮಾವಿನ ಪುಡಿಯನ್ನು ಹಚ್ಚಿ 2-3 ಗಂಟೆಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಒಣಗಲು ಬಿಡಿ. ನಂತರ ಈ ತುಂಡುಗಳನ್ನು 5-6 ನಿಮಿಷ ಬಿಸಿ ನೀರಿನಲ್ಲಿ ಕುದಿಸಿ, ನೀರು ತೆಗೆದು ಪಕ್ಕಕ್ಕಿಡಿ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಸುವರ್ಣಗಡ್ಡೆ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.

ಇನ್ನೊಂದು ಪ್ಯಾನ್‌ನಲ್ಲಿ ಜೀರಿಗೆ, ದಾಲ್ಚಿನ್ನಿ ಸೊಪ್ಪು ತಾಳಿಸಿ, ಟೊಮೆಟೊ ಪ್ಯೂರಿ ಸೇರಿಸಿ ಎಣ್ಣೆ ಬಿಡುವವರೆಗೆ ಬೇಯಿಸಿ. ನಂತರ ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ ಹಾಗೂ ಸ್ವಲ್ಪ ಒಣ ಮಾವಿನ ಪುಡಿ ಸೇರಿಸಿ. ಜೊತೆಗೆ ಮೊಸರು, ಗರಂ ಮಸಾಲೆ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಹುರಿದ ಸುವರ್ಣಗಡ್ಡೆ ಸೇರಿಸಿ 10 ನಿಮಿಷ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

ಇದನ್ನೂ ಓದಿ