ಮೈಸೂರು ಕೇವಲ ಅರಮನೆಗಳು, ದಸರಾ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಮಾತ್ರ ಪ್ರಸಿದ್ಧವಲ್ಲ. ಈ ನಗರವು ತನ್ನದೇ ಆದ ಆಹಾರ ಸಂಸ್ಕೃತಿಗೂ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಖಾದ್ಯಗಳು ಸ್ಥಳೀಯರನ್ನೂ ಪ್ರವಾಸಿಗರನ್ನೂ ಒಂದೇ ರೀತಿಯಲ್ಲಿ ಆಕರ್ಷಿಸುತ್ತವೆ. ಮೈಸೂರಿಗೆ ಬಂದಾಗ ತಪ್ಪದೇ ಭೇಟಿ ಕೊಡಬೇಕಾದ 5 ಖಾದ್ಯ ತಾಣಗಳನ್ನು ನೋಡೋಣ.
ಮೈಲಾರಿ ಹೋಟೆಲ್ (Mylari Hotel)
ಮೈಸೂರು ಮಸಾಲೆ ದೋಸೆಯ ಪರ್ಯಾಯವೇ ಮೈಲಾರಿ ಹೋಟೆಲ್. ಇಲ್ಲಿನ ಮೃದುವಾದ ಬೆಣ್ಣೆ ದೋಸೆ ಹಾಗೂ ತಾಜಾ ಚಟ್ನಿ ಪ್ರವಾಸಿಗರಿಗೂ ಸ್ಥಳೀಯರಿಗೂ ತುಂಬಾ ಇಷ್ಟವಾದ ಪ್ಲೇಸ್.

RRR ಹೋಟೆಲ್ (RRR Hotel)
ಆಂಧ್ರ ಶೈಲಿಯ ಊಟಕ್ಕೆ ಹೆಸರಾದ RRR ಹೋಟೆಲ್‌ನಲ್ಲಿ ಸಿಗುವ ಬಾಳೆ ಎಲೆ ಊಟ ಪ್ರವಾಸಿಗರ ಮೆಚ್ಚುಗೆಯನ್ನು ಗಳಿಸಿದೆ. ಬಿಸಿಬಿಸಿ ಅನ್ನ, ಸಾಂಬಾರ್, ಪಲ್ಯ ಹಾಗೂ ಪಾಯಸ ವಿಶೇಷ ಆಕರ್ಷಣೆ.

ಗಾಯತ್ರಿ ಟಿಫಿನ್ ರೂಮ್ (GTR – Gayathri Tiffin Room)
ಬೆಳಗಿನ ತಿಂಡಿಗೆ ಜನರ ಮೊದಲ ಆಯ್ಕೆಯೇ GTR. ಇಲ್ಲಿನ ಇಡ್ಲಿ, ವಡೆ, ದೋಸೆ ಮತ್ತು ಫಿಲ್ಟರ್ ಕಾಫಿ ಮೈಸೂರಿನ ಸಾಂಪ್ರದಾಯಿಕ ರುಚಿಯನ್ನು ಪ್ರತಿಬಿಂಬಿಸುತ್ತವೆ.

ಹಳ್ಳಿ ಹಟ್ಟಿ
ಇದು ಸ್ಥಳೀಯರಲ್ಲಿ ತುಂಬಾ ಜನಪ್ರಿಯವಾದ ಪ್ಲೇಸ್, ನೀವು ಬೇಗನೆ ಬರದಿದ್ದರೆ ನಿಮ್ಮ ನೆಚ್ಚಿನ ಆಹಾರ ಇಲ್ಲಿ ಖಾಲಿಯಾಗೋದು ಪಕ್ಕಾ. ರೊಟ್ಟಿ, ಇಡ್ಲಿ, ವಡೆ ಇಲ್ಲಿ ಸಿಕ್ಕಾಪಟ್ಟೆ ಫೇಮಸ್.

ಅನಿಮಾ ಮಧ್ವ ಭವನ (Anima Madhva Bhavan)
ಸಾಂಪ್ರದಾಯಿಕ ಮಧ್ವ ಊಟ ಸವಿಯಬೇಕೆಂದರೆ ಅನಿಮಾ ಮಧ್ವ ಭವನವೇ ಸೂಕ್ತ ಸ್ಥಳ. ಇಲ್ಲಿನ ಬಾಳೆ ಎಲೆ ಊಟದಲ್ಲಿ ಸಿಗುವ ಪಾಯಸ, ಹೋಳಿಗೆ ಹಾಗೂ ವಿಶೇಷ ಸಾಂಬಾರ್ ರುಚಿಯೇ ಬೇರೆ.
