April 19, 2026
Sunday, April 19, 2026
spot_img

ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ನಾಕೌಟ್: ಇದು ನಮ್ಮ ಪಾಲಿಗೆ ಕೆಟ್ಟ ರಾತ್ರಿ ಎಂದ ಮಾರ್ಕ್ರಾಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ20 ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಒಂಬತ್ತು ವಿಕೆಟ್‌ಗಳ ಭಾರೀ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಅಜೇಯವಾಗಿ ಸೆಮಿಫೈನಲ್ ಗೆ ಬಂದಿದ್ದ ದಕ್ಷಿಣ ಆಫ್ರಿಕಾ ಈ ಫಲಿತಾಂಶದಿಂದ ನಿರಾಶೆಗೊಂಡಿದೆ.

ಸೋಲಿನ ಬಳಿಕ ನಾಯಕ ಐಡೆನ್ ಮಾರ್ಕ್ರಾಮ್ ಪ್ರತಿಕ್ರಿಯಿಸಿ, “ಇದು ನಮ್ಮ ಪಾಲಿಗೆ ಕೆಟ್ಟ ರಾತ್ರಿ. ಪಿಚ್ ಉತ್ತಮವಾಗಿ ಆಡುತ್ತದೆ ಎಂದು ನಿರೀಕ್ಷಿಸಿದ್ದೆವು. ನಾವು ಬೇಗ ಹೊಂದಿಕೊಳ್ಳಬೇಕಾಗಿತ್ತು,” ಎಂದು ಹೇಳಿದರು. 190 ರನ್ ತಲುಪಿದ್ದರೆ ಪಂದ್ಯದಲ್ಲಿ ಉಳಿಯಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 169 ರನ್ ಗಳಿಸಿತು. ಮಾರ್ಕೊ ಜಾನ್ಸೆನ್ 55 ರನ್‌ಗಳಿಂದ ಗಮನ ಸೆಳೆದರು. ಉತ್ತರವಾಗಿ ನ್ಯೂಜಿಲೆಂಡ್ ಆರಂಭಿಕರಾದ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ 9.1 ಓವರ್‌ಗಳಲ್ಲಿ 117 ರನ್ ಜೊತೆಯಾಟ ನಡೆಸಿ ಗೆಲುವಿಗೆ ಅಡಿಪಾಯ ಹಾಕಿದರು. ಅಲೆನ್ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ವೇಗವಾದ ಶತಕ ದಾಖಲಿಸಿದರು.

ಪಂದ್ಯಾವಳಿಯಿಡೀ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಹೆಮ್ಮೆ ಇದೆ ಎಂದು ಮಾರ್ಕ್ರಾಮ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !