March 11, 2026
Wednesday, March 11, 2026
spot_img

ಅಧಿಕಾರಿಗಳ ಸೋಗಿನಲ್ಲಿ ಬಂದು ಒಂದೂವರೆ ಕೋಟಿ ದೋಚಿ ಪರಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಒಂದೂವರೆ ಕೋಟಿ ರೂಪಾಯಿ ದರೋಡೆ ಮಾಡಲಾಗಿದ್ದು ಯಲಹಂಕದಲ್ಲಿ ಮನೆಗೆ ನುಗ್ಗಿ ಒಂದೂವರೆ ಕೋಟಿ ಲೂಟಿ ಮಾಡಿದ್ದಾರೆ.

ಗಿರಿರಾಜು ಎಂಬುವವರ ಮನೆಗೆ ಬಂದ ನಾಲ್ವರು ಖದೀಮರು ಇನ್ನೋವಾ ಕಾರಿನಲ್ಲಿ ಬಂದು ಒಂದುವರೆ ಕೋಟಿ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಂದು ಹೇಳಿ ಒಂದುವರೆ ಕೋಟಿ ರೂಪಾಯಿ ರಾಬರಿ ಮಾಡಿದ್ದಾರೆ.

ಜಮೀನು ಖರೀದಿಗೆ ಗಿರಿರಾಜು ಹಣ ತಂದುಕೊಂಡು ಇಟ್ಟಿದ್ದರು. ನಾಲ್ವರು ಮನೆಗೆ ಬರುತ್ತಿದ್ದ ಮನೆಯವರಿಗೆ ಪ್ರಶ್ನೆ ಮಾಡಿದ್ದಾರೆ ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ಎಂದು ನಾಲ್ವರು ಪ್ರಶ್ನಿಸಿದ್ದಾರೆ. ಅಡುಗೆ ಮನೆಯಲ್ಲಿ ಹಣದ ಬ್ಯಾಗ್ ಇರುವ ಬಗ್ಗೆ ಕುಟುಂಬಸ್ಥರೇ ಅವರಿಗೆ ನೀಡಿದ್ದಾರೆ. ನಂತರ ಮನೆ ಮಾಲೀಕ ಗಿರಿರಾಜು ಎಲ್ಲಿದ್ದಾರೆ ಅಂತ ಕೇಳಿದ್ದಾರೆ. ಗಿರಿರಾಜು ಮನೆಯಲ್ಲಿ ಇಲ್ಲ ಅಂತ ಮನೆಯವರು ಹೇಳಿದ್ದಾರೆ. ಗಿರಿರಾಜು ಇಲ್ಲ ಎಂದಾಗ ಹಣದೊಂದಿಗೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಒಂದುವರೆ ಕೋಟಿ ಜೊತೆಗೆ 50 ಗ್ರಾಂ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ.

ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !