September 6, 2026
Sunday, September 6, 2026
spot_img

2029ರೊಳಗೆ ಭಾರತ ‘ಡ್ರಗ್ಸ್ ಫ್ರೀ’; 1 ಲಕ್ಷ ‘ನಶಾಮುಕ್ತಿ ಮಿತ್ರ’ರಿಗೆ ಟ್ರೈನಿಂಗ್: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ 2029ರ ವೇಳೆಗೆ ಡ್ರಗ್ಸ್ ಮುಕ್ತ ಭಾರತ ನಿರ್ಮಿಸುವ ಸಂಕಲ್ಪವೂ ಒಂದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ದೇಶದಲ್ಲಿ ನಕ್ಸಲಿಸಂ ಮತ್ತು ಭಯೋತ್ಪಾದನೆ ವಿರುದ್ಧ ಕೈಗೊಂಡ ಕ್ರಮದಂತೆ ಮಾದಕವಸ್ತುಗಳ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಜತೆಗೆ ಮಾದಕವಸ್ತು ನಿಯಂತ್ರಣಕ್ಕಾಗಿ ಪ್ರತಿ ರಾಜ್ಯದಲ್ಲೂ ಸಂಪೂರ್ಣ ಸಜ್ಜಿತ ಆ್ಯಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್‌ ಸ್ಥಾಪಿಸುವ ಗುರಿ ಇದ್ದು,ತನಿಖೆಯನ್ನು ಇನ್ನೂ ಬಲಪಡಿಸುವ ಯೋಜನೆಯಿದೆ ಎಂದರು.

ಇದನ್ನೂ ಓದಿ:

‘ಡ್ರಗ್ಸ್ ಮುಕ್ತ ಭಾರತ’ ಅಭಿಯಾನವನ್ನು ಯಶಸ್ವಿಗೊಳಿಸಲು ದೇಶಾದ್ಯಂತ 1 ಲಕ್ಷ ‘ನಶಾಮುಕ್ತಿ ಮಿತ್ರ’ರನ್ನು ತರಬೇತುಗೊಳಿಸಲು ಸರ್ಕಾರ ಮುಂದಾಗಿದೆ. ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ‘ಮೈ ಭಾರತ್’ ವೇದಿಕೆಗಳ ಮೂಲಕ ಯುವಕರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.

ಮುಂದಿನ ಮೂರು ವರ್ಷಗಳಲ್ಲಿ 100 ಅಂತಾರಾಷ್ಟ್ರೀಯ ಹಾಗೂ ಅಂತರರಾಜ್ಯ ಡ್ರಗ್ಸ್ ಜಾಲಗಳನ್ನು ಧ್ವಂಸಗೊಳಿಸುವ ಗುರಿಯನ್ನೂ ಸರ್ಕಾರ ಹೊಂದಿದೆ. ಮಾದಕವಸ್ತು ಪ್ರಕರಣಗಳಿಗೆ ಸಂಬಂಧಿಸಿದ 100 ಪರಾರಿಯಾಗಿರುವ ಆರೋಪಿಗಳನ್ನು ದೇಶಕ್ಕೆ ಮರಳಿ ಕರೆತರುವ ಪ್ರಯತ್ನ ನಡೆಯಲಿದೆ.

ಇದರ ಜೊತೆಗೆ, ಮುಂದಿನ ಮೂರು ವರ್ಷಗಳಲ್ಲಿ ಮಾದಕವಸ್ತು ತಯಾರಿಕೆಗೆ ಸಂಬಂಧಿಸಿದ 100 ಅಕ್ರಮ ಪ್ರಯೋಗಾಲಯಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !