Monday, September 22, 2025

ನವರಾತ್ರಿ ಮೊದಲ ದಿನವೇ ತ್ರಿಪುರ ಸುಂದರಿ ದರುಶನ ಪಡೆದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ತ್ರಿಪುರಾದ ಅಗರ್ತಲಾದಲ್ಲಿರುವ ತ್ರೀಪುರ ಸುಂದರಿ ದೇವಿ ದರುಶನ ಪಡೆದರು.

ಈ ವೇಳೆ ಪ್ರಸರ್ಕಾರದ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಡ್ರೈವ್ (ಪ್ರಸಾದ್) ಯೋಜನೆಯಡಿ ಹಲವು ಮಾತಾ ತ್ರಿಪುರಾ ಸುಂದರಿ ದೇವಸ್ಥಾನ ಸಂಕೀರ್ಣದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರ ಪಟ್ಟಣದಲ್ಲಿರುವ ಪ್ರಾಚೀನ 51 ಶಕ್ತಿ ಪೀಠಗಳಲ್ಲಿ ಒಂದಾಗಿರುವ, ಮಾತಾ ತ್ರಿಪುರಾ ಸುಂದರಿ ದೇವಸ್ಥಾನ ಸಂಕೀರ್ಣದ ಅಭಿವೃದ್ಧಿ ಕಾರ್ಯದ ಯೋಜನೆಯಡಿ ದೇವಸ್ಥಾನ ಆವರಣದ ಸುಧಾರಣೆ, ಹೊಸ ದಾರಿಗಳು, ನವೀಕರಿಸಲಾದ ಪ್ರವೇಶ ದ್ವಾರಗಳು ಮತ್ತು ಬೇಲಿ, ಒಳಚರಂಡಿ ವ್ಯವಸ್ಥೆ, ಮೂರ್ನೆ ಮಹಡಿಯ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಗಳು ನಡೆಯಲಿವೆ. ಅದ್ರಂತೆ, ಈ ಕಟ್ಟಡದಲ್ಲಿ ಅಂಗಡಿಗಳು, ಧ್ಯಾನಮಂದಿರ, ಅತಿಥಿಗೃಹ ಸೌಲಭ್ಯಗಳು, ಕಚೇರಿ ಕೊಠಡಿಗಳು ಮುಂತಾದವುಗಳನ್ನು ಒಳಗೊಂಡಿರುತ್ತವೆ. ಹಾಗಾಗಿ, ಈ ಯೋಜನೆಯು ಪ್ರವಾಸೋದ್ಯಮ ವೃದ್ಧಿಗೆ, ಉದ್ಯೋಗ ಮತ್ತು ವ್ಯಾಪಾರಾವಕಾಶಗಳ ಸೃಷ್ಟಿಗೆ, ಹಾಗೂ ಆ ಪ್ರದೇಶದ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮಹತ್ತರ ಪಾತ್ರವಹಿಸಲಿದೆ.

ಇದನ್ನೂ ಓದಿ