ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿ ಮೂಗುತಿ ಧರಿಸುವ ಅಭ್ಯಾಸ ಕಡಿಮೆಯಾಗಿದ್ರು, ಕೆಲವರು ಇದನ್ನು ಫ್ಯಾಶನ್ ಆಗಿಮಾತ್ರ ಪರಿಗಣಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮೂಗುತಿ ಧರಿಸುವುದು ಸಾಂಪ್ರದಾಯಿಕ ಆಚರಣೆ ಅಂತಿದ್ರು, ಹೆಚ್ಚಿನ ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಹುಟ್ಟಿನಿಂದಲೇ ಮೂಗುತಿ ಧರಿಸುವ ಸಂಪ್ರದಾಯವಿತ್ತು. ಈ ಸಾಂಪ್ರದಾಯದ ಹಿಂದಿರುವ ಮುಖ್ಯ ಕಾರಣವೆಂದರೆ ದೇಹದ ಆರೋಗ್ಯ ಮತ್ತು ಶ್ರೇಯಸ್ಸು.

ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಧರಿಸುವ ಪದ್ಧತಿ 16ನೇ ಶತಮಾನದಿಂದ ಪ್ರಚಲಿತವಾಗಿದೆ. ಮೊಘಲ್ ಆಳ್ವಿಕೆಯಲ್ಲಿ ಇದು ಹೆಚ್ಚು ಜನಪ್ರಿಯವಾಯಿತು. ಸಂಪ್ರದಾಯದಂತೆ, ಮೂಗುತ್ತಿ ಧ್ರಿಸುವುದು ದೇಹದ ನಕಾರಾತ್ಮಕ ಶಕ್ತಿಗಳನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಎಡ ಮೂಗಿನ ಹೊಳ್ಳೆಯ ನರಗಳು ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ, ಮೂಗುತಿ ಧರಿಸುವುದು ಕೆಲವು ಆರೋಗ್ಯ ಲಾಭಗಳನ್ನು ಒದಗಿಸುತ್ತದೆ.

ಇದಲ್ಲದೆ, ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಮುತ್ತುಗಳಿಂದ ದೇಹದೊಂದಿಗೆ ನಿರಂತರ ಸಂಪರ್ಕ ಸಾಧನೆಯಾಗುತ್ತದೆ, ಇದರಿಂದ ಪಿರಿಯಡ್ಸ್ ಸಮಯದ ನೋವು ಮತ್ತು ಹೆರಿಗೆಯ ಸಮಯದಲ್ಲಿ ಸಹಾಯ ದೊರೆಯುತ್ತದೆ. ಮೂಗುತಿ ಮೈಗ್ರೇನ್ ತಡೆಯುವಲ್ಲಿ ಸಹ ಪ್ರಯೋಜನಕಾರಿಯಾಗಿದೆ.

ಇನ್ನೂ ಮೂಗು ಚುಚ್ಚಿಸಿಕೊಂಡ ಬಳಿಕ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಸ್ವಚ್ಛತೆ ಅತ್ಯಂತ ಮುಖ್ಯ. ಮೊದಲಿಗೆ ಮೂಗುತ್ತಿ ಚುಚ್ಚಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆದೆ ಮೂಗು ಮುಟ್ಟಬೇಕು. ಇಲ್ಲವಾದರೆ ಇನ್ಫೆಕ್ಷನ್ ಸಂಭವ ಹೆಚ್ಚಿರುತ್ತದೆ. ಜೊತೆಗೆ ಚುಚ್ಚಿದ ನಂತರ ಚರ್ಮ ಉಬ್ಬುವುದು, ರಕ್ತಸ್ರಾವ ಅಥವಾ ಅಲರ್ಜಿಗಳು ಕೆಲವೊಂದು ಕಾರಣಗಳಿಂದ ಸಂಭವಿಸಬಹುದು. ಚುಚ್ಚಿನ ನಂತರ ದಿನಕ್ಕೆ 2–3 ಬಾರಿ ಮೂಗಿನ ರಂಧ್ರವನ್ನು ಸ್ವಚ್ಛಗೊಳಿಸುವುದು ಉತ್ತಮ. ಟೀ ಟ್ರೀ ಆಯಿಲ್ ಹಚ್ಚುವುದರಿಂದ ಕೂಡ ಸೋಂಕು ನಿವಾರಣೆಗೆ ಸಹಾಯಮಾಡುತ್ತದೆ.