September 27, 2026
Sunday, September 27, 2026
spot_img

ಹೈದರಾಬಾದ್​​ನಲ್ಲಿ ರಶ್ಮಿಕಾ, ವಿಜಯ್ ಆರತಕ್ಷತೆ ಗೌಜಿ: ‘ವಿರೋಶ್’ ಜೋಡಿಗೆ ಶುಭಹಾರೈಸಿದ ಡಿಸಿಎಂ ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್​​ನಲ್ಲಿ ನಡೆಯುತ್ತಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಆರತಕ್ಷತೆಯಲ್ಲಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ, ನವಜೋಡಿಗೆ ಶುಭಹಾರೈಸಿದ್ದಾರೆ.

ಹೈದರಾಬಾದ್‌ಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನವವಧು ರಶ್ಮಿಕಾ ಮಂದಣ್ಣ ಮತ್ತು ವರ ವಿಜಯ್ ದೇವರಕೊಂಡ ಅವರಿಗೆ ಹೂಗುಚ್ಛ ನೀಡಿ ಆಶೀರ್ವದಿಸಿದರು. ಈ ವೇಳೆ ವಿಜಯ್ ಕುಟುಂಬಸ್ಥರು ಹಾಗೂ ರಶ್ಮಿಕಾ ಅವರ ತಂದೆ-ತಾಯಿಯೊಂದಿಗೆ ಡಿಕೆಶಿ ಕೆಲಕಾಲ ಸಂವಾದ ನಡೆಸಿದರು.

ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನವಿದ್ದ ಈ ಸಮಾರಂಭದಲ್ಲಿ ಟಾಲಿವುಡ್‌ನ ಹಲವು ಸ್ಟಾರ್ ನಟ-ನಟಿಯರು ಭಾಗವಹಿಸಿದ್ದರು. ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆದ ಈ ಇನ್ವೈಟ್ ಓನ್ಲಿ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ ದಿಗ್ಗಜರು ಕಂಡುಬಂದರು.

ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಅಲ್ಲಿಯೂ ಸಹ ಮೊಬೈಲ್ ಬಳಕೆಗೆ ನಿರ್ಬಂಧ ಹೇರುವ ಮೂಲಕ ಗೌಪ್ಯತೆ ಕಾಯ್ದುಕೊಳ್ಳಲಾಗಿತ್ತು. ಇದೀಗ ಹೈದರಾಬಾದ್‌ನಲ್ಲಿ ನಡೆದ ಗಾಲಾ ರಿಸೆಪ್ಷನ್ ಮೂಲಕ ವಿಜಯ್ ಮತ್ತು ರಶ್ಮಿಕಾ ತಮ್ಮ ಸಿನೆಮಾ ಮಿತ್ರರೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.

Must Read