Tuesday, September 23, 2025

Travel | ಫ್ಯಾಮಿಲಿ ಜೊತೆ ಮೈಸೂರು ಟ್ರಿಪ್ ಮಾಡ್ಬೇಕು ಅನ್ಕೊಂಡಿದ್ದೀರಾ? ಹಾಗಿದ್ರೆ ಈ ಪ್ಲೇಸ್ ಮಿಸ್ ಮಾಡ್ಬೇಡಿ!

ಮೈಸೂರಿನ ದಸರಾ ಹಬ್ಬವು ನಿನ್ನೆಯಷ್ಟೇ ಶುರುವಾಗಿದೆ. ಕರ್ನಾಟಕದ ನಾಡಹಬ್ಬವಾಗಿ ದೇಶ-ವಿದೇಶದಲ್ಲಿ ಪ್ರಸಿದ್ಧಿ ಹೊಂದಿರುವ ದಸರಾ ಹಬ್ಬದ ಸಮಯದಲ್ಲಿ ಮೈಸೂರಿನ ನಗರವು ಬೆಳಕು, ಸಂಭ್ರಮ ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ತುಂಬಿರುತ್ತದೆ. ಕುಟುಂಬದೊಂದಿಗೆ ಪ್ರವಾಸ ಮಾಡುವವರು ಅರಮನೆ, ದೇವಾಲಯಗಳು, ಉದ್ಯಾನವನಗಳು ಮತ್ತು ಇತರೆ ಆಕರ್ಷಕ ಸ್ಥಳಗಳಿಗೆ ಭೇಟಿಕೊಡೋದು ಒಂದು ಭಾವನಾತ್ಮಕ ಅನುಭವವನ್ನು ಕೊಡುತ್ತದೆ.

ಮೈಸೂರು ಅರಮನೆ:
ಮೈಸೂರು ಅರಮನೆ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ಅರಮನೆಯನ್ನು ದೀಪಗಳ ಬೆಳಕು ಮತ್ತು ವಿಶಿಷ್ಟ ಅಲಂಕಾರಗಳಿಂದ ಕಂಗೊಳಿಸಲಾಗುತ್ತದೆ. ಕಲ್ಯಾಣ ಮಂಟಪ, ಗೊಂಬೆಗಳ ಮಂಟಪ, ದರ್ಬಾರ್ ಹಾಲ್, ಅಂಬಾ ವಿಲಾಸ ಹಾಲ್ ಗಳು ಪ್ರವಾಸಿಗರ ಗಮನ ಸೆಳೆಯುತ್ತವೆ.

ಚಾಮುಂಡೇಶ್ವರಿ ದೇವಾಲಯ:
ಚಾಮುಂಡೇಶ್ವರಿ ಬೆಟ್ಟದ ಮೇಲೆ ಇರುವ ಈ ದೇವಾಲಯವು ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳವಾಗಿದೆ. ದುರ್ಗಾ ದೇವಿಯನ್ನು ಚಾಮುಂಡೇಶ್ವರಿ ಹೆಸರಿನಲ್ಲಿ ಪೂಜಿಸಲಾಗುತ್ತದೆ. ದಸರಾ ಹಬ್ಬದ ದಿನ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆಲಯದ ಸಮೀಪದಲ್ಲಿ ಮಹಿಷಾಸುರನ ಪ್ರತಿಮೆ ಕೂಡ ವೀಕ್ಷಿಸಬಹುದಾಗಿದೆ.

ಮೈಸೂರು ಮೃಗಾಲಯ:
ಮೈಸೂರು ಮೃಗಾಲಯ ಅಥವಾ ಶ್ರೀ ಚಾಮರಾಜೇಂದ್ರ ಮೃಗಾಲಯವು ಮಕ್ಕಳಿಗೆ ಹಾಗೂ ಕುಟುಂಬದವರಿಗೆ ಅನುಕೂಲಕರ ಸ್ಥಳ. ಇಲ್ಲಿ ಸಿಂಹ, ಚಿರತೆ, ಹುಲಿ, ಆನೆ ಮತ್ತು ವಿವಿಧ ಪಕ್ಷಿಗಳಂತಹ ವೈವಿಧ್ಯಮಯ ಪ್ರಾಣಿಗಳನ್ನು ವೀಕ್ಷಿಸಬಹುದು. ಈ ಮೃಗಾಲಯವನ್ನು 1892ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಮುಂಚೆ ಇದು ಒಡೆಯರ ಖಾಸಗಿ ಬೇಟೆಯಾಡುವ ಸ್ಥಳವಾಗಿತ್ತು.

ಬೃಂದಾವನ ಗಾರ್ಡನ್:
ಮೈಸೂರಿನಿಂದ 20 ಕಿ.ಮೀ ದೂರದಲ್ಲಿರುವ ಬೃಂದಾವನ ಗಾರ್ಡನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಶಾಲಾ ಬಾಗ್‌ಗಳಿಂದ ಪ್ರೇರಿತವಾದ ಈ ಉದ್ಯಾನದಲ್ಲಿ ಹೂವುಗಳಿಂದ ಅಲಂಕೃತ ಗಾರ್ಡನ್, ಕುಳಿತುಕೊಳ್ಳಲು ಆಸನಗಳು ಮತ್ತು ಕಾರಂಜಿ ಪ್ರದರ್ಶನಗಳು ಬಹಳ ಜನಪ್ರಿಯ. ಕಾವೇರಿ ನದಿಯಲ್ಲಿ ದೋಣಿ ವಿಹಾರ ಕೂಡ ಮಾಡಬಹುದು.

ಶ್ರೀರಂಗಪಟ್ಟಣದ ಪ್ರವಾಸಿ ಸ್ಥಳಗಳು:
ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯ, ಟಿಪ್ಪು ಸುಲ್ತಾನ್ ಸ್ಮಾರಕಗಳು, ದರಿಯಾ ದೌಲತ್ ಬಾಗ್, ಗುಂಬಜ್, ಟಿಪ್ಪುವಿನ ಕೋಟೆ ಹಾಗೂ ಗಂಗಾಧರೇಶ್ವರ ದೇವಾಲಯದಂತಹ ಐತಿಹಾಸಿಕ ಸ್ಥಳಗಳನ್ನು ಭೇಟಿ ನೀಡಬಹುದು. ಇವುಗಳ ಮೂಲಕ ಪ್ರವಾಸಿಗರು ದಸರಾ ಹಬ್ಬದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಅನುಭವಿಸಬಹುದು.

ಇದನ್ನೂ ಓದಿ