Tuesday, September 23, 2025

ರಾಷ್ಟ್ರ ರಾಜಧಾನಿಯಲ್ಲಿ ಮಧ್ಯರಾತ್ರಿಯವರೆಗೆ ರಾಮಲೀಲಾ, ದುರ್ಗಾ ಪೂಜೆ: ದೆಹಲಿ CM ರೇಖಾ ಗುಪ್ತಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ರಾಮಲೀಲಾ, ದುರ್ಗಾ ಪೂಜೆ ಮತ್ತು ಇತರ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಬಳಸಲಾಗುವ ಧ್ವನಿವರ್ಧಕಗಳನ್ನು ಮಧ್ಯರಾತ್ರಿಯವರೆಗೆ ಬಳಸಬಹುದು ಎಂದು ದೆಹಲಿ CM ರೇಖಾ ಗುಪ್ತಾ ಹೇಳಿದ್ದಾರೆ.

ಇತರ ರಾಜ್ಯಗಳಲ್ಲಿನ ಆಚರಣೆಗಳಂತೆಯೇ ಹಿಂದು ಹಬ್ಬಗಳನ್ನು ಸಮಯದ ನಿರ್ಬಂಧಗಳಿಲ್ಲದೆ ಮುಂದುವರಿಸಲು ಅವಕಾಶ ನೀಡುವ ಉದ್ದೇಶ ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗುಜರಾತ್‌ನಲ್ಲಿ ದಾಂಡಿಯಾ ಇಡೀ ರಾತ್ರಿ ನಡೆಯುತ್ತದೆ. ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಹಾಗಿದ್ದರೆ ದೆಹಲಿ ಜನರ ತಪ್ಪಾದರೂ ಏನು? ಹೀಗಾಗಿ ನವರಾತ್ರಿ ಉತ್ಸವಕ್ಕೆ ಈ ಬಾರಿ ರಾತ್ರಿ 12ರವರೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ರಾಮಲೀಲಾ, ದುರ್ಗಾಪೂಜೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12ರವರೆಗೂ ನಡೆಸಬಹುದು ಎಂದಿದ್ದಾರೆ.

ರಾಮಲೀಲಾ, ದುರ್ಗಾಪೂಜೆ, ದಸರಾ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಸುವ ಅವಧಿಯನ್ನು ದೆಹಲಿ ಸರ್ಕಾರ ಸೋಮವಾರದಿಂದ ವಿಸ್ತರಿಸಿದೆ. ಈ ಆದೇಶವು ಸೆ. 22ರಿಂದ ಅ. 3ರವರೆಗೆ ಇರಲಿದೆ. ಸರ್ಕಾರದ ಈ ನಿರ್ಧಾರಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸೆಕ್ಸೇನಾ ಅನುಮೋದನೆ ನೀಡಿದ್ದಾರೆ.

ಈ ಆದೇಶವು ಶಬ್ದಮಾಲಿನ್ಯದ ನಿರ್ಬಂಧಗಳಿಗೆ ಒಳಪಟ್ಟು ಕಾರ್ಯಕ್ರಮಗಳನ್ನು ರಾತ್ರಿ 10ರ ಬದಲು ಮಧ್ಯರಾತ್ರಿ 12ರವರೆಗೂ ನಡೆಸಲು ಸರ್ಕಾರ ಅನುಮತಿಸಿದೆ. ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕಗಳಿಂದ ಹೊರಹೊಮ್ಮುವ ಶಬ್ದವು 45 ಡೆಸಿಬಲ್‌ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಮಧ್ಯರಾತ್ರಿಯವರೆಗೆ ರಾಮಲೀಲಾ, ದುರ್ಗಾ ಪೂಜೆ: ದೆಹಲಿ CM ರೇಖಾ ಗುಪ್ತಾ

ರಾಷ್ಟ್ರ ರಾಜಧಾನಿಯಲ್ಲಿ ರಾಮಲೀಲಾ, ದುರ್ಗಾ ಪೂಜೆ ಮತ್ತು ಇತರ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಬಳಸಲಾಗುವ ಧ್ವನಿವರ್ಧಕಗಳನ್ನು ಮಧ್ಯರಾತ್ರಿಯವರೆಗೆ ಬಳಸಬಹುದು ಎಂದು ದೆಹಲಿ CM ರೇಖಾ ಗುಪ್ತಾ ಹೇಳಿದ್ದಾರೆ.

ಇತರ ರಾಜ್ಯಗಳಲ್ಲಿನ ಆಚರಣೆಗಳಂತೆಯೇ ಹಿಂದು ಹಬ್ಬಗಳನ್ನು ಸಮಯದ ನಿರ್ಬಂಧಗಳಿಲ್ಲದೆ ಮುಂದುವರಿಸಲು ಅವಕಾಶ ನೀಡುವ ಉದ್ದೇಶ ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗುಜರಾತ್‌ನಲ್ಲಿ ದಾಂಡಿಯಾ ಇಡೀ ರಾತ್ರಿ ನಡೆಯುತ್ತದೆ. ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಹಾಗಿದ್ದರೆ ದೆಹಲಿ ಜನರ ತಪ್ಪಾದರೂ ಏನು? ಹೀಗಾಗಿ ನವರಾತ್ರಿ ಉತ್ಸವಕ್ಕೆ ಈ ಬಾರಿ ರಾತ್ರಿ 12ರವರೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ರಾಮಲೀಲಾ, ದುರ್ಗಾಪೂಜೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12ರವರೆಗೂ ನಡೆಸಬಹುದು ಎಂದಿದ್ದಾರೆ.

ರಾಮಲೀಲಾ, ದುರ್ಗಾಪೂಜೆ, ದಸರಾ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಸುವ ಅವಧಿಯನ್ನು ದೆಹಲಿ ಸರ್ಕಾರ ಸೋಮವಾರದಿಂದ ವಿಸ್ತರಿಸಿದೆ. ಈ ಆದೇಶವು ಸೆ. 22ರಿಂದ ಅ. 3ರವರೆಗೆ ಇರಲಿದೆ. ಸರ್ಕಾರದ ಈ ನಿರ್ಧಾರಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸೆಕ್ಸೇನಾ ಅನುಮೋದನೆ ನೀಡಿದ್ದಾರೆ.

ಈ ಆದೇಶವು ಶಬ್ದಮಾಲಿನ್ಯದ ನಿರ್ಬಂಧಗಳಿಗೆ ಒಳಪಟ್ಟು ಕಾರ್ಯಕ್ರಮಗಳನ್ನು ರಾತ್ರಿ 10ರ ಬದಲು ಮಧ್ಯರಾತ್ರಿ 12ರವರೆಗೂ ನಡೆಸಲು ಸರ್ಕಾರ ಅನುಮತಿಸಿದೆ. ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕಗಳಿಂದ ಹೊರಹೊಮ್ಮುವ ಶಬ್ದವು 45 ಡೆಸಿಬಲ್‌ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ