Wednesday, September 24, 2025

ತಂದೆಯ ಚಿಕಿತ್ಸೆಗಾಗಿ 20 ಬೈಕ್‌ಗಳನ್ನು ಕದ್ದಿದ್ದವ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 20 ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಮೂಲಕ ಬಿ.ಫಿರೋಜ್ (24) ಬಂಧಿತ ಆರೋಪಿ. ಈತನಿಂದ ಸುಮಾರು 20 ಲಕ್ಷ ರೂ. ಮೌಲ್ಯದ 20 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ವೈಟ್‌ಫೀಲ್ಡ್ ಬಳಿಯ ಅನುಗೊಂಡನಹಳ್ಳಿಯಲ್ಲಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದು, ಈತನ ತಂದೆ ಮೊಹಮ್ಮದ್ ಬಾಷಾ ಕದಿರಿಯಲ್ಲಿ ವಾಸವಿದ್ದಾರೆ. ಮೊಹಮ್ಮದ್ ಬಾಷಾ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಫಿರೋಜ್ ಕಳ್ಳತನಕ್ಕಿಳಿದಿದ್ದ ಎಂದು ತಿಳಿದುಬಂದಿದೆ.

ತಂದೆ ಚಿಕಿತ್ಸೆಗಾಗಿ ಮೊದಲು ವೈಟ್ ಫೀಲ್ಡ್ ನಲ್ಲಿ ಬೈಕ್ ಕಳ್ಳತನ ಮಾಡಿದ್ದ ಈತ, ನಂತರ ಕ್ರಮೇಣ ಇದನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಇದರಂತೆ ಕಾಡುಗೋಡಿ, ವೈಟ್‌ಫೀಲ್ಡ್ ಮತ್ತು ಮೆಟ್ರೋ ನಿಲ್ದಾಣಗಳ ಬಳಿಯ ಇತರ ಪಾರ್ಕಿಂಗ್ ಪ್ರದೇಶಗಳಿಂದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ