Wednesday, September 24, 2025

Interesting Facts | ಮಹಿಳಾ ಸಾಧುಗಳು ಮುಟ್ಟಾದಾಗ ಏನ್ ಮಾಡ್ತಾರೆ?

ಹಿಂದು ಧರ್ಮದಲ್ಲಿ ಸನ್ಯಾಸತ್ವ ಎಂದರೆ ಕುಟುಂಬ, ವಸತಿ ಹಾಗೂ ಭೌತಿಕ ಆಕಾಂಕ್ಷೆಗಳನ್ನು ತ್ಯಜಿಸಿ ದೈವಿಕ ಕಾರ್ಯದಲ್ಲಿ ತೊಡಗಿಸುವ ಜೀವನಶೈಲಿ. ಇದು ಕೇವಲ ಪುರುಷರಷ್ಟೇ ಅಲ್ಲ, ಮಹಿಳೆಯರು ಕೂಡ ಸ್ವೀಕರಿಸಬಹುದು. ಇತ್ತೀಚಿನ ದಿನಗಳಲ್ಲಿ ಬಾಲ್ಯಾವಸ್ಥೆಯಲ್ಲೇ ಕೆಲ ಹೆಣ್ಣುಮಕ್ಕಳು ಸನ್ಯಾಸತ್ವವನ್ನು ಸ್ವೀಕರಿಸುವ ಉದಾಹರಣೆಗಳೂ ಕಂಡುಬರುತ್ತಿವೆ. ಆದರೆ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಒಂದು ಪ್ರಶ್ನೆ ಎಲ್ಲರ ಮನಸಲ್ಲೂ ಬಂದೇ ಬರುತ್ತದೆ. ಅದು ಮಹಿಳಾ ಸಾಧುಗಳು ಋತುಮತಿಯಾದಾಗ ಅವರು ಯಾವ ರೀತಿಯ ನಿಯಮಗಳನ್ನು ಪಾಲಿಸುತ್ತಾರೆ ಎಂಬುದು.

ಸನ್ಯಾಸ ಸ್ವೀಕರಿಸಲು, ಮಹಿಳೆ ಸಾಮಾನ್ಯವಾಗಿ 10 ರಿಂದ 15 ವರ್ಷಗಳ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಇದರಿಂದ ಆಕೆ ತನ್ನನ್ನು ದೇವರಿಗೆ ಸಮರ್ಪಿಸಿಕೊಂಡಿದ್ದಾಳೆ ಎಂದು ಗುರುಗಳು ಅರ್ಥಮಾಡಿಕೊಳ್ಳುತ್ತಾರೆ. ನಂತರ ಮಾತ್ರ ಸನ್ಯಾಸ ಸ್ವೀಕಾರಕ್ಕೆ ಅನುಮತಿ ನೀಡಲಾಗುತ್ತದೆ. ದೀಕ್ಷೆ ಪಡೆಯುವ ವೇಳೆ, ತಲೆ ಬೋಳಿಸಿ, ನದಿಯಲ್ಲಿ ಸ್ನಾನ ಮಾಡಿ, ಆರಾಧಿಸುವ ದೇವರ ಹೆಸರನ್ನು ಜಪ ಮಾಡುವುದು ಪರಂಪರೆ. ಸಾಮಾನ್ಯವಾಗಿ ಶಿವ, ದತ್ತಾತ್ರೇಯನ ಆರಾಧನೆ ಹೆಚ್ಚು ಕಂಡುಬರುತ್ತದೆ.

ಹೆಣ್ಣು ಸನ್ಯಾಸಿಗಳಿಗೂ ಮುಟ್ಟ ಸಾಮಾನ್ಯವಾಗಿ ಸಂಭವಿಸುತ್ತದೆ. ಆದರೆ ಈ ವೇಳೆ ಅವರು ನದಿಯ ನೀರು ಅಥವಾ ಬಾವಿಯ ನೀರು ಬಳಸದೆ, ಪ್ರತ್ಯೇಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುತ್ತಾರೆ. ಜಪ, ಧ್ಯಾನ, ಪಠಣ ಅಥವಾ ಪವಿತ್ರ ವಸ್ತುಗಳೊಂದಿಗೆ ನೈರ್ಮಲ್ಯ ಕಾಪಾಡುವ ಆಧ್ಯಾತ್ಮಿಕ ಅಭ್ಯಾಸಗಳನ್ನು ಮುಂದುವರಿಸುತ್ತಾರೆ. ಬೌದ್ಧ ಸಂಪ್ರದಾಯದಲ್ಲಿ ಮಹಿಳಾ ಸನ್ಯಾಸಿಗಳು ಆಧುನಿಕ ವೈಯಕ್ತಿಕ ನೈರ್ಮಲ್ಯ ವಿಧಾನಗಳನ್ನು ಅನುಸರಿಸುತ್ತಾರೆ.

ಮುಟ್ಟು ನೈಸರ್ಗಿಕ ದೈಹಿಕ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸನ್ಯಾಸಿಯ ಆಧ್ಯಾತ್ಮಿಕ ಅಭ್ಯಾಸಕ್ಕೆ ತಡೆ ಬರುವುದಿಲ್ಲ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡುವ ಮೂಲಕ ಮಹಿಳಾ ಸನ್ಯಾಸಿಗಳು ತನ್ನ ಆಧ್ಯಾತ್ಮಿಕ ಶಕ್ತಿ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತಾರೆ. ದೈವಿಕ ಸೇವೆ ಮತ್ತು ಧ್ಯಾನದಲ್ಲಿ ಮುಟ್ಟು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಅನ್ನೋದು ಮುಖ್ಯ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಇದನ್ನೂ ಓದಿ