Wednesday, September 24, 2025

Do You Know | ಪ್ರಪಂಚದ ಅತ್ಯಂತ ದುಬಾರಿ ತರಕಾರಿ ಯಾವುದು ಗೊತ್ತಾ?

ನಾವು ಪ್ರತಿದಿನ ತಿನ್ನುವ ತರಕಾರಿಗಳು ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಆದರೆ ಜಗತ್ತಿನ ಕೆಲವೊಂದು ಅಪರೂಪದ ತರಕಾರಿಗಳು ಬೆಲೆಯಲ್ಲಿ ಚಿನ್ನದ ಆಭರಣಗಳಷ್ಟೇ ದುಬಾರಿಯಾಗಿವೆ ಎಂಬುದು ನಿಮಗೆ ಗೊತ್ತೇ? ಇವು ಸಾಮಾನ್ಯ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗೋದಿಲ್ಲ, ವಿಶೇಷ ಪ್ರದೇಶಗಳಲ್ಲಿ ಮಾತ್ರ ಬೆಳೆದು ಅಪರೂಪದ ಕಾರಣಕ್ಕೆ ಇವುಗಳ ಬೆಲೆ ಗಗನಕ್ಕೇರಿವೆ. ಇಂದು ಅಂತಹ ಒಂದು ದುಬಾರಿ ತರಕಾರಿ ಕುರಿತು ತಿಳಿಯೋಣ.

ಹಾಪ್ ಶೂಟ್ಸ್ (Hop Shoots)
ಹಾಪ್ ಶೂಟ್ಸ್ ಎನ್ನುವ ಈ ತರಕಾರಿಯು ವಿಶ್ವದಲ್ಲೇ ಅತಿ ದುಬಾರಿಯಾದ ತರಕಾರಿ ಎಂದು ಪರಿಗಣಿಸಲಾಗಿದೆ. ಇದರ ಒಂದು ಕಿಲೋಗ್ರಾಂ ಬೆಲೆ ಸುಮಾರು 80,000 ರಿಂದ 1 ಲಕ್ಷ ರೂಪಾಯಿವರೆಗೆ ತಲುಪುತ್ತದೆ. ಮುಖ್ಯವಾಗಿ ಯುರೋಪಿನ ಕೆಲವು ಭಾಗಗಳಲ್ಲಿ ಬೆಳೆಯುವ ಈ ತರಕಾರಿ ಬಹಳ ಅಪರೂಪ.

ಇವುಗಳ ಜೀವಿತಾವಧಿಯು ಬಹಳ ಕಡಿಮೆ ಇದ್ದು. ಇವುಗಳ ಸಾಗಾಣಿಕೆ ಮತ್ತು ಮಾರುಕಟ್ಟೆಯ ಶೇಖರಣೆಯಲ್ಲಿ ಬಹಳ ವೆಚ್ಚವಾಗುವುದು ಕೂಡ ಈ ತರಕಾರಿ ದುಬಾರಿಯಾಗಲು ಒಂದು ಅಂಶ ಎಂದರು ತಪ್ಪಾಗಲಾರದು.

ಹಾಪ್ ಶೂಟ್ಸ್ ಗಿಡವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಹೆಚ್ಚಿನ ಶ್ರಮ, ಸಮಯ ಮತ್ತು ವಿಶೇಷ ಹವಾಮಾನ ಬೇಕಾಗುತ್ತದೆ. ಈ ತರಕಾರಿಯನ್ನು ಹೆಚ್ಚುಪಾಲು ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ. ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಇದು ಸಹಾಯಕವೆಂದು ಸಂಶೋಧನೆಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ