ಇಂದಿನ ಪೀಳಿಗೆಯಲ್ಲಿ ಮದುವೆ ಅಂದ್ರೆ ಕೇವಲ ಕುಟುಂಬಗಳು ಒಪ್ಪಿ ನಡೆಸುವ ಸಂಬಂಧ ಮಾತ್ರವಲ್ಲ, ಬದಲಾಗಿ ಇಬ್ಬರೂ ಪರಸ್ಪರ ಒಪ್ಪಿಕೊಂಡು, ಅರ್ಥ ಮಾಡಿಕೊಂಡು ಮುಂದುವರಿಯುವ ಬಾಂಧವ್ಯವಾಗಿದೆ. ಕೆಲ ಸಂಸ್ಕೃತಿಗಳಲ್ಲಿ ಮದುವೆಗೂ ಮುನ್ನ ಜೋಡಿಗಳು ಒಟ್ಟಾಗಿ ಸುತ್ತಾಡಲು ಹೋಗುವುದು ಅಸಾಮಾನ್ಯವೆಂದು ಕಾಣಬಹುದು. ಆದರೆ, ಭಾವಿ ಪತಿ-ಪತ್ನಿಯರು ಮದುವೆಯ ಮೊದಲು ಒಟ್ಟಾಗಿ ಸಮಯ ಕಳೆಯುವುದು, ಮಾತುಕತೆ ನಡೆಸುವುದು, ಪ್ರವಾಸ ಮಾಡುವುದು ದಾಂಪತ್ಯ ಜೀವನಕ್ಕೆ ಹಲವಾರು ರೀತಿಯಲ್ಲಿ ಸಹಾಯಕವಾಗುತ್ತದೆ.
- ಪರಸ್ಪರ ಅರಿವು ಹೆಚ್ಚಿಸುತ್ತದೆ: ಮದುವೆಗೆ ಮೊದಲು ಒಟ್ಟಿಗೆ ಪ್ರವಾಸ ಮಾಡಿದರೆ ಹುಡುಗ ಮತ್ತು ಹುಡುಗಿ ಇಬ್ಬರ ವ್ಯಕ್ತಿತ್ವ, ಸ್ವಭಾವ, ಅಭಿರುಚಿ ಹಾಗೂ ನ್ಯೂನತೆಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಇದು ಭವಿಷ್ಯದ ಜೀವನದಲ್ಲಿ ಹೊಂದಾಣಿಕೆಗೆ ಸಹಕಾರಿಯಾಗುತ್ತದೆ.
- ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತೆ: ಒಟ್ಟಿಗೆ ಕಾಲ ಕಳೆಯುವ ವೇಳೆ ತಮ್ಮ ಸಮಸ್ಯೆಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತೆ. ಇದರಿಂದ ಪರಸ್ಪರ ನಂಬಿಕೆ ಗಟ್ಟಿಯಾಗುತ್ತದೆ ಮತ್ತು ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.
- ಸಂಬಂಧ ಗಟ್ಟಿಯಾಗುತ್ತದೆ: ಪ್ರಯಾಣದ ವೇಳೆ ಒಟ್ಟಿಗೆ ತಿನ್ನುವುದು, ಸುತ್ತಾಡುವುದು, ನಿರ್ಣಯಗಳನ್ನು ತೆಗೆದುಕೊಳ್ಳುವುದು ಇವರಿಬ್ಬರ ನಡುವೆ ಬಲವಾದ ಬಾಂಧವ್ಯವನ್ನು ನಿರ್ಮಾಣವಾಗುತ್ತೆ. ದಂಪತಿಗಳು “ನಾವು” ಎಂಬ ಭಾವನೆಗೆ ಹೆಚ್ಚು ಹತ್ತಿರವಾಗುತ್ತಾರೆ.
- ಹೊಂದಾಣಿಕೆಯ ಪರೀಕ್ಷೆ: ಒಟ್ಟಿಗೆ ಸಮಯ ಕಳೆಯುವಾಗ ಅವರ ನಡುವೆ ಹೊಂದಾಣಿಕೆ ಇದೆ ಅಥವಾ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೊಂದಿಕೆಯಾಗದಿದ್ದರೆ ಮದುವೆಯ ನಂತರ ಎದುರಾಗಬಹುದಾದ ಗೊಂದಲಗಳು ತಪ್ಪಿಸಿಕೊಳ್ಳಬಹುದು.
- ಹೊಸ ಅನುಭವ ಮತ್ತು ನೆನಪುಗಳು: ಮದುವೆಗೂ ಮುನ್ನದ ಒಟ್ಟಿನ ಪ್ರವಾಸವು ದಂಪತಿಗಳಿಗೆ ವಿಶೇಷ ಅನುಭವ ನೀಡುತ್ತದೆ. ಹೊಸ ನೆನಪುಗಳನ್ನು ಕಟ್ಟಿಕೊಡುವುದರೊಂದಿಗೆ, ಭವಿಷ್ಯದ ಜೀವನಕ್ಕೆ ಒಂದು ಉತ್ತಮ ಪ್ರಾರಂಭವಾಗುತ್ತದೆ.
ಮದುವೆ ಜೀವನದ ದೊಡ್ಡ ತೀರ್ಮಾನವಾಗಿರುವುದರಿಂದ, ಮದುವೆಯ ಮೊದಲು ಒಟ್ಟಾಗಿ ಕಾಲ ಕಳೆಯುವುದು ಅತ್ಯಂತ ಮುಖ್ಯ. ಇದು ದಂಪತಿಗಳಿಗೆ ಪರಸ್ಪರರನ್ನು ಅರ್ಥಮಾಡಿಕೊಳ್ಳಲು, ನಂಬಿಕೆಯನ್ನು ಕಟ್ಟಿಕೊಳ್ಳಲು ಹಾಗೂ ಉತ್ತಮ ಸಂಬಂಧದ ನೆಲೆಯನ್ನಿರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಮದುವೆಗೂ ಮುನ್ನ ಒಟ್ಟಿಗೆ ಓಡಾಡುವುದು ಕೇವಲ ಒಂದು ಪ್ರವಾಸವಲ್ಲ, ಭವಿಷ್ಯದ ದಾಂಪತ್ಯ ಜೀವನದ ತಯಾರಿಯಾಗಿದೆ.