Thursday, September 25, 2025

Hair Care | ತಲೆಹೊಟ್ಟಿನ ಸಮಸ್ಯೆ ಕಡಿಮೆ ಮಾಡೋಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್

ಇತ್ತೀಚಿಗೆ ಪದೇ ಪದೇ ಹವಾಮಾನ ಬದಲಾವಣೆ ಆಗ್ತಿದೆ. ಇದರಿಂದ ಜನರಲ್ಲಿ ಚರ್ಮ ಹಾಗೂ ಕೂದಲು ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ತಲೆಯಲ್ಲಿ ಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿದ್ದು, ತುರಿಕೆ, ಕೂದಲು ಉದುರುವುದು ಹೆಚ್ಚಾಗುತ್ತಿದೆ. ಇವುಗಳಿಗೆ ಮಾರುಕಟ್ಟೆಯ ಉತ್ಪನ್ನಗಳಿಗಿಂತ ಮನೆಯಲ್ಲೇ ಸಿಗುವ ಸರಳ ಮನೆಮದ್ದುಗಳು ಪರಿಣಾಮಕಾರಿ ಪರಿಹಾರ ನೀಡಬಹುದು.

  • ಕಹಿ ಬೇವಿನ ಎಲೆಗಳು – ಬೇವಿನ ಎಲೆಗಳಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಗಳಿದ್ದು, ತಲೆ ಹೊಟ್ಟನ್ನು ಕಡಿಮೆ ಮಾಡುತ್ತವೆ. ಬೇವಿನ ಎಲೆಗಳನ್ನು ಕುದಿಸಿ ಆ ನೀರನ್ನು ಕೂದಲಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
  • ನಿಂಬೆ ಹಣ್ಣಿನ ರಸ – ನಿಂಬೆಯ ಆಂಟಿಮೈಕ್ರೋಬಿಯಲ್ ಅಂಶಗಳು ತಲೆ ಹೊಟ್ಟನ್ನು ಸಂಪೂರ್ಣವಾಗಿ ನಿವಾರಿಸುತ್ತವೆ. ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಹೊಟ್ಟಿನ ತೊಂದರೆ ಕಡಿಮೆ ಮಾಡಬಹುದು.
  • ಮೊಸರು ಮತ್ತು ನಿಂಬೆ ಮಿಶ್ರಣ – ಮೊಸರಿನಲ್ಲಿ ಸ್ವಲ್ಪ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ಚಿದರೆ ಹೊಟ್ಟು ಕಡಿಮೆಯಾಗುವುದರ ಜೊತೆಗೆ ಕೂದಲಿಗೆ ತಾಜಾತನ ನೀಡುತ್ತದೆ. ವಾರಕ್ಕೆ ಒಂದು ಬಾರಿ ಮಾಡುವುದು ಉತ್ತಮ.
  • ತೆಂಗಿನ ಎಣ್ಣೆ – ನಿಯಮಿತವಾಗಿ ತೆಂಗಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಬೇರು ಬಲವಾಗುವುದರ ಜೊತೆಗೆ ಹೊಟ್ಟಿನ ಸಮಸ್ಯೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ