Thursday, September 25, 2025

Vastu | ಎಲ್ಲೋ ಸಿಕ್ತು ಅಂತ ಈ ವಸ್ತುಗಳನ್ನು ತಪ್ಪಿಯೂ ಮನೆಗೆ ತರಬೇಡಿ: ದುರಾದೃಷ್ಟ ಬರುತ್ತೆ

ಪ್ರಾಚೀನ ಭಾರತೀಯ ವಾಸ್ತು ಶಾಸ್ತ್ರವು ಮನೆಗೆ ಶಾಂತಿ, ಸುಖ ಮತ್ತು ಐಶ್ವರ್ಯ ತರುವ ನಿಯಮಗಳನ್ನು ನಿರ್ದಿಷ್ಟವಾಗಿ ವಿವರಿಸಿದೆ. ಆದರೆ ಕೆಲವೊಂದು ವಸ್ತುಗಳನ್ನು ಉಚಿತವಾಗಿ ಸ್ವೀಕರಿಸುವುದು ಅಥವಾ ಕೊಡುಗೆ ರೂಪದಲ್ಲಿ ಮನೆಗೆ ತರುವುದರಿಂದ ಮನೆಯ ಶಕ್ತಿಕೇಂದ್ರ ದುರ್ಬಲಗೊಳ್ಳುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸಿ ಮನೆಯವರ ಆರೋಗ್ಯ, ಸಂತೋಷ ಮತ್ತು ಮನಶಾಂತಿಗೆ ದುಷ್ಪರಿಣಾಮ ಉಂಟುಮಾಡಬಹುದು.

  • ಘಂಟೆ ಅಥವಾ ಶಂಖ: ಯಾರಾದರೂ ಬಳಸಿದ್ದ ಶಂಖ ಅಥವಾ ದೇವಾಲಯದಿಂದ ಬಂದ ಘಂಟೆಗಳನ್ನು ಉಚಿತವಾಗಿ ತರುವುದು ಸಕಾರಾತ್ಮಕ ಶಕ್ತಿಗೆ ಅಡ್ಡಿಯಾಗುತ್ತದೆ. ಇವುಗಳಲ್ಲಿ ಬೇರೆಯವರ ಪೂರ್ವಶಕ್ತಿ ಉಳಿದುಕೊಳ್ಳುವ ಸಾಧ್ಯತೆ ಇದೆ.
  • ಹಳೆಯ ಚಪ್ಪಲಿಗಳು: ಇತರರು ಬಳಸಿದ ಹಳೆಯ ಶೂ, ಚಪ್ಪಲಿಗಳನ್ನು ಮನೆಗೆ ತರುವುದರಿಂದ ದುಷ್ಟ ಶಕ್ತಿ ಆವರಿಸಬಹುದು. ಇದು ಮಾನಸಿಕ ಒತ್ತಡ ಮತ್ತು ಅಶಾಂತಿಯನ್ನೂಂಟುಮಾಡುತ್ತದೆ.
  • ಹಳೆಯ ದೇವರ ಚಿತ್ರಗಳು ಅಥವಾ ಮೂರ್ತಿಗಳು: ಉಚಿತವಾಗಿ ನೀಡಿದ ದೇವರ ಹಳೆಯ ಚಿತ್ರಗಳು ಅಥವಾ ಮೂರ್ತಿಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು.
  • ಹಳೆಯ ನಾಣ್ಯಗಳು ಅಥವಾ ತಾಮ್ರದ ವಸ್ತುಗಳು: ಬೇರೆಯವರು ನೀಡುವ ಹಳೆಯ ನಾಣ್ಯಗಳು, ಪದಕಗಳು ಅಥವಾ ತಾಮ್ರದ ಪಾತ್ರೆಗಳು ಹಿಂದಿನ ಶಕ್ತಿ ಅಥವಾ ಕರ್ಮವನ್ನು ಹೊಂದಿರಬಹುದು. ಇವು ಮನೆಯಲ್ಲಿ ಅಶಾಂತಿಯನ್ನು ಉಂಟುಮಾಡುತ್ತವೆ.
  • ಹಳೆಯ ಹೂವಿನ ಹಾರ ಅಥವಾ ಮಾಲೆ: ಬಳಸಿದ ಹೂವಿನ ಹಾರಗಳನ್ನು ತರುವುದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ