Saturday, September 27, 2025

ಇವನೆಂತ ಮನುಷ್ಯ? ಚಿಕ್ಕ ತಪ್ಪಿಗೆ ಆ ಮಗುವಿಗೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟುಬಿಟ್ಟ ಹೆತ್ತಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು ತಂದೆಯೊಬ್ಬ ತನ್ನ 13 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ 40 ವರ್ಷದ ಆರೋಪಿ ತಂದೆ ಅಜಯ್‌ ಶರ್ಮಾನನ್ನ ಪೊಲೀಸರು ಬಂಧಿಸಿದ್ದಾರೆ. ಸೋನಮ್ (13) ಮೃತಪಟ್ಟ ಮಗಳು.

ಶುಕ್ರವಾರ ಸಂಜೆ ಹೊತ್ತಿಗೆ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದ್ದಾಗಿ ಬುಲಂದ್‌ಶಹರ್ ಪೊಲೀಸರಿಗೆ ಮಾಹಿತಿ ಬಂದಿತು. ಅನುಪ್‌ಶಹರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಸೇತುವೆ ಕೆಳಗಿನ ಪೊದೆಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ತಂದೆಯೇ ಆರೋಪಿ ಅನ್ನೋದು ಗೊತ್ತಾಗಿದೆ.

ಪೊಲೀಸರ ಪ್ರಕಾರ, ಆರೋಪಿ ತನ್ನ ಮಗಳು ಮನೆಯಿಂದ ಹಣ ಕದಿಯುತ್ತಿದ್ದಳು. ಇದರಿಂದ ಗಂಡ-ಹೆಂಡ್ತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಹಾಗಾಗಿ ನಾನೇ ಮಗಳನ್ನ ಕೊಂದೆ. ಕೊಂದ ಬಳಿಕ ಮಗಳು ಸಂಬಂಧಿಕರ ಮನೆಗೆ ಹೋಗಿದ್ದಾಳೆ, 3-4 ದಿನ ಅಲ್ಲೇ ಇರುತ್ತಾಳೆಂದು ಹೆಂಡತಿಗೆ ಹೇಳಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.