Tuesday, September 30, 2025

ಏಷ್ಯಾಕಪ್‌ ಚಾಂಪಿಯನ್ಸ್ ಗೆ ಸಿಕ್ತು BCCIನಿಂದ ಭರ್ಜರಿ ಗಿಫ್ಟ್! ಅದ್ ಏನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ರೋಮಾಂಚಕ ಗೆಲುವು ಸಾಧಿಸಿ ಭಾರತವು ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಿದೆ. ತಂಡದ ಅದ್ಭುತ ಪ್ರದರ್ಶನಕ್ಕೆ ಪ್ರತಿಫಲವಾಗಿ ಬಿಸಿಸಿಐ (BCCI) ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಒಟ್ಟು 21 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಅದೇ ರೀತಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ (ACC) ಚಾಂಪಿಯನ್ ತಂಡಕ್ಕೆ 2.6 ಕೋಟಿ ರೂ. ಅಧಿಕೃತ ಬಹುಮಾನ ನೀಡಿದೆ. ಪಾಕಿಸ್ತಾನ ರನ್ನರ್‌ ಅಪ್ ಆಗಿ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ.

ಭಾರತ ಚಾಂಪಿಯನ್ ಆದರೂ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಿರೀಕ್ಷಿತ ಘಟನೆ ನಡೆಯಿತು. ಎಸಿಸಿ ಅಧ್ಯಕ್ಷರಾಗಿರುವ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿದ ಕಾರಣ, ವಿಜಯಶಾಲಿ ಭಾರತಕ್ಕೆ ಟ್ರೋಫಿ ಹಸ್ತಾಂತರವೇ ಆಗಲಿಲ್ಲ. ಇದರ ಪರಿಣಾಮವಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಟ್ರೋಫಿ ಇಲ್ಲದೆ ವಿಜಯೋತ್ಸವ ಆಚರಿಸಬೇಕಾಯಿತು.

ಅಭಿಮಾನಿಗಳ ಆಕ್ರೋಶ:
ಈ ಘಟನೆಯ ಮಧ್ಯೆ ಕ್ರೀಡಾಂಗಣದಲ್ಲಿ ಹಾಜರಿದ್ದ ಭಾರತೀಯ ಅಭಿಮಾನಿಗಳು ಜೋರಾಗಿ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿ ನಖ್ವಿಯವರನ್ನು ಹಾಸ್ಯಗೈದರು. ಇದರಿಂದ ಪ್ರಶಸ್ತಿ ಪ್ರದಾನ ಸಮಾರಂಭವು ವಿಳಂಬಗೊಂಡು ಅಸಮಾಧಾನದ ವಾತಾವರಣ ನಿರ್ಮಾಣವಾಯಿತು.

ಆಟದ ಮೈದಾನದಲ್ಲಿ ಭರ್ಜರಿ ಸಾಧನೆ ಮಾಡಿದ ಭಾರತ ತಂಡ ಪ್ರಶಂಸೆಗೆ ಪಾತ್ರವಾದರೂ, ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ರಾಜಕೀಯ ಬಣ್ಣದ ನಾಟಕ ನಡೆಯಿತು. ಚಾಂಪಿಯನ್ ಪಟ್ಟವನ್ನು ಪಡೆದರೂ, ಟ್ರೋಫಿ ಕೈ ಸೇರದೇ ಉಳಿದ ಈ ಘಟನೆ ಏಷ್ಯಾಕಪ್‌ ಇತಿಹಾಸದಲ್ಲಿ ವಿಶೇಷ ನೆನಪಾಗಿ ಉಳಿಯುವಂತಾಗಿದೆ.