ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಎದುರು ಸೋಲುಂಡ ಪಾಕಿಸ್ತಾನ ಕ್ರಿಕೆಟ್ ತಂಡದ ನಿರಾಸೆಯ ನಡುವೆಯೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ವಿವಾದಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ. ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ ಗೆದ್ದು ಏಷ್ಯಾಕಪ್ ಪ್ರಶಸ್ತಿಯನ್ನು ಎತ್ತಿಹಿಡಿದ ನಂತರ, ಪಿಸಿಬಿ ತನ್ನ ಆಟಗಾರರ ಪಂದ್ಯ ಶುಲ್ಕವನ್ನು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಕುಟುಂಬಗಳಿಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, “ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಪಡೆದ ಸಂಭಾವನೆಯನ್ನು ಮೇ 7ರಂದು ನಡೆದ ದಾಳಿಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಅರ್ಪಿಸಲಾಗಿದೆ. ಅವರ ಆತ್ಮಗಳಿಗೆ ಶಾಂತಿ ಸಿಗಲಿ ಹಾಗೂ ಕುಟುಂಬಗಳಿಗೆ ಧೈರ್ಯ ಸಿಗಲಿ” ಎಂದು ಬರೆದಿದೆ.
ಆದರೆ, ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿದವರು ಸಾಮಾನ್ಯ ನಾಗರಿಕರಲ್ಲ, ಭಾರತೀಯ ಸೇನೆಯ ಆಪರೇಷನ್ ಸಿಂಧೂರಿನಲ್ಲಿ ನಾಶವಾದ ಭಯೋತ್ಪಾದಕರ ಕುಟುಂಬಗಳು ಎಂಬುದು ನಂತರ ಸ್ಪಷ್ಟವಾಯಿತು. ವಾಸ್ತವವಾಗಿ ಮೇ 7ರಂದು ಭಾರತೀಯ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ನಡೆದ ಭಾರೀ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಧ್ವಂಸಗೊಳಿಸಿ, ಮಸೂದ್ ಅಜರ್‌ಗೆ ಸೇರಿದ ಅತೀವಾದಿ ಗುಂಪಿನ ಹಲವು ಸದಸ್ಯರನ್ನು ಹೊಡೆದುರುಳಿಸಿದ್ದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ನಿರ್ಧಾರವು ಕ್ರಿಕೆಟ್ ಜಗತ್ತಿನಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಸೋಲಿನ ಬೇಸರವನ್ನು ಬದಿಗಿಟ್ಟು ಭಯೋತ್ಪಾದಕರ ಪರವಾಗಿ ನಿಂತ ಈ ನಡೆ, ಕ್ರೀಡೆಗೆ ರಾಜಕೀಯ ನೆರಳು ಬೀರುತ್ತಿದೆ ಎಂಬ ಆರೋಪ ಮೂಡಿಸಿದೆ.