Tuesday, September 30, 2025

ಟ್ರೋಫಿ ಸಿಗದ್ದಿದ್ರೇನು? ಎತ್ತ್ಕೊಂಡು ಹೋಗ್ತಿರೋದೇ ಅಲ್ವಾ! ಇದೇ ತಾನೇ ಪಾಕಿಗಳ ಬುದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ 2025 ಫೈನಲ್‌ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ ಗೆಲುವಿನ ಸಂಭ್ರಮದೊಂದಿಗೆ ಕೂಡ, ಬಹುಮಾನ ವಿತರಣೆ ಸಮಾರಂಭದಲ್ಲಿ ದೊಡ್ಡ ರಾಜಕೀಯ ಡ್ರಾಮಾ ಆರಂಭವಾಯಿತು. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರು.

ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ನಿರಾಕರಿಸಿದ ತಕ್ಷಣ, ನಖ್ವಿ ಅವರು ಟ್ರೋಫಿ ಮತ್ತು ಪದಕಗಳನ್ನು ಎತ್ತ್ಕೊಂಡು ವೇದಿಕೆಯಿಂದ ಹೊರಟೆ ಬಿಟ್ಟರು. ಈ ದೃಶ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಎಸಿಸಿ ಅಧ್ಯಕ್ಷರ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿದ್ದು ನಿಜ. ಆದ್ರೆ, ಆ ವ್ಯಕ್ತಿ ಟ್ರೋಫಿ ಮತ್ತು ಪದಕಗಳನ್ನು ವಶಪಡಿಸಿಕೊಳ್ಳುವುದು ತಪ್ಪು. ಇದು ತುಂಬಾ ದುರದೃಷ್ಟಕರ ಎಂದು ಹೇಳಿದ್ದಾರೆ.