ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ (Indian Cricket Team) ಪಾಕಿಸ್ತಾನವನ್ನು ಸೋಲಿಸಿ ಮೂರನೇ ಬಾರಿಗೆ ಟೂರ್ನಿಯನ್ನು ಗೆದ್ದಿತು. ಆದರೆ ಗೆಲುವಿನ ನಂತರ ನಡೆದ ಘಟನಗಳು ಕ್ರಿಕೆಟ್ ಜಗತ್ತಿನಲ್ಲಿ ವಿವಾದಕ್ಕೆ ಕಾರಣವಾಯಿತು. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಂಡ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರು.
ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ಹೇಳಿದ್ರು, ನಾವು ಏಳು ಪಂದ್ಯಗಳನ್ನು ಆಡಿ ಶ್ರಮಿಸಿದ್ದೇವೆ. ಈ ಗೆಲುವು ಸುಲಭವಾಗಿರಲಿಲ್ಲ. ನಮ್ಮ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ನಿಜವಾದ ಟ್ರೋಫಿ ಎಂದು ತಮ್ಮ ತಂಡದ ಆಟಗಾರರ ಕಡೆಗೆ ಬೆರಳು ತೋರಿಸುತ್ತಾ ಹೇಳಿದರು. ಅಭ್ಯಾಸ ಮತ್ತು ಶ್ರಮವೇ ನಮಗೆ ಕೊಡುಗೆ ನೀಡಿದ ಜಯ ಆಟ ಮುಗಿದ ನಂತರ, ಚಾಂಪಿಯನ್‌ಗಳು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ, ಟ್ರೋಫಿಯ ಚಿತ್ರವಲ್ಲ ಎಂದರು.
ಸೂರ್ಯ ಮತ್ತು ತಿಲಕ್ ವರ್ಮಾ ಏಷ್ಯಾ ಕಪ್ ಟ್ರೋಫಿಯನ್ನು ಹಿಡಿದಿರುವ AI ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಮಾತನಡಿದ ಸೂರ್ಯ, “ನೀವು ಟ್ರೋಫಿಯನ್ನು ನೋಡಲಿಲ್ಲವೇ?. ತಂಡವು ವೇದಿಕೆಯ ಮೇಲೆ ಕುಳಿತು, ಮತ್ತು ಅಭಿಷೇಕ್ ಮತ್ತು ಶುಭ್ಮನ್ ಗಿಲ್ ಈಗಾಗಲೇ ಟ್ರೋಫಿಯೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋವೇ ನಮ್ಮ ಗೆಲುವಿಗೆ ಪುರಾವೆಯಾಗಿದೆ” ಎಂದು ತಮಾಷೆಯಾಗಿ ಹೇಳಿದ್ದಾರೆ.