Wednesday, January 14, 2026
Wednesday, January 14, 2026
spot_img

ಮುಂಜಾನೆಯಿಂದ ರಾತ್ರಿವರೆಗೂ ಕೈಯಲ್ಲಿ ಫೋನ್‌! ಸದ್ದಿಲ್ಲದೇ ಸಮಸ್ಯೆ ಕೊಡುವ ಸ್ಮಾರ್ಟ್‌ ಡಿವೈಸ್‌!

ಬೆಳಗ್ಗೆ ಎದ್ದಾಗ ಕೈ ತಡವರಿಸುತ್ತಿದ್ದಂತೆಯೇ ಫೋನ್‌ ಸಿಗಬೇಕು. ಕೆಲವರಿಗೆ ದಿಂಬಿನಡಿ, ಕೆಲವರಿಗೆ ಪಕ್ಕ ಇನ್ನು ಹಲವರಿಗೆ ಕಾಲಿನ ಬಳಿ ಫೋನ್‌ ಇಟ್ಟು ಮಲಗುವ ಅಭ್ಯಾಸ. ಇನ್ನು ಮಕ್ಕಳನ್ನು ಮಲಗಿಸಿಕೊಂಡಂತೆ ಮೊಬೈಲ್‌ನ್ನು ಪಕ್ಕಕ್ಕೆ ಅಂಟಿಸಿಕೊಂಡಿರುತ್ತಾರೆ. ಬೆಳಗ್ಗೆ ಎದ್ದ ನಂತರ ವಾಶ್‌ರೂಮ್‌ಗೆ ಹೋಗುವಾಗ ಫೋನ್‌ ಕೂಡ ಒಳಕ್ಕೇ ಬರುತ್ತಿದೆ. ನಂತರ ಜೇಬು ಸೇರುತ್ತದೆ. ನಂತರ ಆಫೀಸ್‌ ಪ್ಯಾಂಟಿನ ಜೇಬು.. ಹೀಗೆ ಮೊಬೈಲ್‌ ಅವಿಭಾಜ್ಯ ಅಂಗವಾಗಿ ಹೋಗಿದೆ. ಆದರೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಾಗುತ್ತವೆ. ಯಾವ ಸಮಸ್ಯೆ ನೋಡಿ..

ಕ್ಯಾನ್ಸರ್: ಸೆಲ್ ಫೋನ್‌ಗಳು ರೇಡಿಯೊಫ್ರೀಕ್ವೆನ್ಸಿ (RF) ವಿಕಿರಣವನ್ನು ಹೊರಸೂಸುತ್ತವೆ. ಈ ವಿಕಿರಣದಿಂದ ಮೆದುಳು ಮತ್ತು ಕೇಂದ್ರ ನರಮಂಡಲದ ಕ್ಯಾನ್ಸರ್‌ಗಳು ಉಂಟಾಗಬಹುದು ಎಂಬ ಆತಂಕವಿದೆ, ಏಕೆಂದರೆ ಫೋನ್‌ಗಳನ್ನು ತಲೆಯ ಹತ್ತಿರ ಬಳಸಲಾಗುತ್ತದೆ. 

ಇತರ ಆರೋಗ್ಯ ಸಮಸ್ಯೆಗಳು: ತಲೆನೋವು, ನಿದ್ರೆಯ ಸಮಸ್ಯೆಗಳು, ನರಸಂಬಂಧಿ ಕಾಯಿಲೆಗಳು ಮತ್ತು ಮಕ್ಕಳಲ್ಲಿ ವರ್ತನೆಯ ಬದಲಾವಣೆಗಳಂತಹ ಇತರ ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ. 

ಪುರುಷರ ಫಲವತ್ತತೆ: ಕೆಲವು ಅಧ್ಯಯನಗಳು ಸೆಲ್ ಫೋನ್ ಬಳಕೆಯು ಪುರುಷರ ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ, ಇದು ಪುರುಷ ಬಂಜೆತನಕ್ಕೆ ಕಾರಣವಾಗಬಹುದು. 

ಏನು ಮಾಡಬಹುದು?

ಅನಿವಾರ್ಯದ ಹೊರತು ಫೋನ್‌ನ್ನು ನಿಮ್ಮಿಂದ ಬೇರ್ಪಡಿಸಿ. ರಿಂಗ್‌ನಲ್ಲಿಟ್ಟು ಫೋನ್‌ ಎತ್ತಿಡಿ. ಯಾವುದೇ ಎಮರ್ಜೆನ್ಸಿ ಎಂದಾದರೆ ಫೋನ್‌ ರಿಂಗ್‌ ಆಗುತ್ತದೆ. ಎದ್ದು ಅಟೆಂಡ್‌ ಮಾಡಬಹುದು.

ಆದಷ್ಟು ದೂರಕ್ಕೆ ಫೋನ್‌ನ್ನು ಇಟ್ಟುಕೊಳ್ಳಿ, ವೈರ್‌ಲೆಸ್‌ ಹೆಡ್‌ಫೋನ್‌ ಬದಲು ವೈರ್‌ ಇರುವ ಹೆಡ್‌ಫೋನ್‌ ಬಳಸಿ, ಆದಷ್ಟು ಸ್ಪೀಕರ್‌ ಫೋನ್‌ನಲ್ಲಿ ಮಾತನಾಡಿ. ಮಲಗುವಾಗ ಬೇಕೇ ಬೇಕು ಎಂದರೆ ಫೋನ್‌ ಏರೋಪ್ಲೇನ್‌ ಮೋಡ್‌ ಅಥವಾ ಸ್ವಿಚ್‌ ಆಫ್‌ ಮಾಡಿ.

Most Read

error: Content is protected !!